ETV Bharat / state

ರಾಜ್ಯದಲ್ಲಿ ಡ್ರಗ್ಸ್​​​‌ ಜಾಲ ಬೇಧಿಸಬೇಕು: ಶ್ರೀರಾಮ ಸೇನೆ ಆಗ್ರಹ - ಡ್ರಗ್‌ ಮಾಫಿಯಾ ವಿರುದ್ಧ ಕಠಿಣ ಕಾನೂನು ಕ್ರಮ

ಡ್ರಗ್ಸ್​‌ ಮಾಫಿಯಾ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮ ಸೇನೆ ಜಿಲ್ಲಾ ಘಟಕ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಮುಖ್ಯಂತ್ರಿಗಳಿಗೆ ಮನವಿ ಸಲ್ಲಿಸಿದರು.

legal action against drug mafia
ಜಿಲ್ಲಾಧಿಕಾರಿ ಮೂಲಕ ಮುಖ್ಯಂತ್ರಿಗಳಿಗೆ ಮನವಿ
author img

By

Published : Sep 10, 2020, 1:07 PM IST

ರಾಯಚೂರು: ರಾಜ್ಯದಲ್ಲಿ ವ್ಯಾಪಕವಾಗಿ ಹರಡಿರುವ ಡ್ರಗ್ಸ್​​​‌ ಮಾಫಿಯಾ ಬೇಧಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಶ್ರೀರಾಮ ಸೇನೆ ಜಿಲ್ಲಾ ಘಟಕ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಡ್ರಗ್ಸ್​​ ಮಾಫಿಯಾ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಶ್ರೀ ರಾಮ ಸೇನೆ ಆಗ್ರಹ

ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ, ಸ್ಥಾನಿಕ ಅಧಿಕಾರಿ ಮೂಲಕ ಮುಖ್ಯಂತ್ರಿಗಳಿಗೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಡ್ರಗ್ಸ್​​ ಜಾಲ ವ್ಯಾಪಕವಾಗಿ ಹರಡಿದ್ದು, ಇಂದು ಸಿನಿ ನಟರ ಮೂಲಕ ಹೊರ ಬಿದ್ದಿದೆ. ಡ್ರಗ್ಸ್​​‌ ಜಾಲಕ್ಕೆ ಯುವ ಸಮುದಾಯ ಬಲಿಯಾಗುತ್ತಿದ್ದು, ಈ ಮಾಫಿಯಾ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

ಚಿತ್ರರಂಗದಲ್ಲಿ ಡ್ರಗ್ಸ್​​ ಜಾಲದ ಬಗ್ಗೆ ತನಿಖೆ ನಡೆಸಬೇಕು. ಡ್ರಗ್ಸ್​​ ಮಾರಟ ಹಾಗೂ ಸಾಗಾಟದಾರರ ವಿರುದ್ಧ ರಾಷ್ಟ್ರೀಯ ಸುರಕ್ಷತಾ ಕಾಯ್ದೆ ಅಡಿಯಲ್ಲಿ ಬಂಧಿಸಬೇಕು. ಶಾಲಾ-ಕಾಲೇಜು ಆವರಣಗಳ ಗುಪ್ತಚರ ಇಲಾಖೆಯ ಗಸ್ತು ಹೆಚ್ಚಿಸಬೇಕು. ಕಳೆದ 7 ವರ್ಷಗಳ ಹಿಂದೆ ರಾಜ್ಯದಲ್ಲಿ ಡ್ರಗ್ಸ್​​​ ಜಾಲ ಕುರಿತು ನಮ್ಮ ಸಂಘಟನೆ ಧ್ವನಿ ಎತ್ತಿದ್ದು, ಇದರ ಹಿಂದೆ ಯಾರೇ ಇದ್ದರೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.