ETV Bharat / state

ಶಾಂತಗೇರಾ ಮರ್ಡರ್​ ಪ್ರಕರಣ: ಆರೋಪಿಗಳನ್ನ ಸೆರೆ ಹಿಡಿಯಲು ವಿಶೇಷ ತಂಡ ರಚನೆ!

author img

By

Published : Dec 16, 2020, 7:04 PM IST

ಅಂಬರೇಶ್​ ಹಾಗೂ ಕುಟುಂಬಸ್ಥರು, ಸ್ನೇಹಿತರು ವಾಹನದಲ್ಲಿ ಶಾವಂತಗಲ್ಲ ಗ್ರಾಮದಲ್ಲಿ ಮಾರೇಮ್ಮ ದೇವಿ ದರ್ಶನಕ್ಕೆ ತೆರಳುತ್ತಿದ್ದರು. ಈ ಮಾರ್ಗ ಮಧ್ಯ ನಾಲ್ಕೈದು ಜನ ರಸ್ತೆಗೆ ಅಡ್ಡಬಂದು ವಾಹನ ತೆರಳಲು ಅವಕಾಶ ನೀಡಿಲ್ಲ. ಈ ವೇಳೆ ಎರಡು ಗುಂಪಿನ ನಡುವೆ ಗಲಾಟೆಯಾಗಿದೆ.

special-team-formed-for-arrest-of-accused-in-shantagera-murder-case
ಶಾಂತಗೇರಾ ಮರ್ಡರ್​ ಪ್ರಕರಣ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಶಾವಂತಗಲ್ಲ (ಶಾಂತಗೇರಾ) ಗ್ರಾಮದಲ್ಲಿ ನಡೆದಿರುವ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನ ಸೆರೆ ಹಿಡಿಯಲು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಎಸ್ಪಿ ನಿಕ್ಕಂ ಪ್ರಕಾಶ್ ತಿಳಿಸಿದ್ದಾರೆ.

ಎಸ್ಪಿ ನಿಕ್ಕಂ ಪ್ರಕಾಶ್ ಮಾತನಾಡಿದರು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರ್ಡರ್ ಆಗಿರುವ ಅಂಬರೇಶ್​ ಗವಿಗಟ್ ಗ್ರಾಮದವರು. ಅಂಬರೇಶ್​ ಹಾಗೂ ಕುಟುಂಬಸ್ಥರು, ಸ್ನೇಹಿತರು ವಾಹನದಲ್ಲಿ ಶಾವಂತಗಲ್ಲ ಗ್ರಾಮದ ಮಾರೇಮ್ಮ ದೇವಿ ದರ್ಶನಕ್ಕೆ ತೆರಳುತ್ತಿದ್ದರು. ಈ ಮಾರ್ಗ ಮಧ್ಯ ನಾಲ್ಕೈದು ಜನ ರಸ್ತೆಗೆ ಅಡ್ಡಬಂದು ವಾಹನ ತೆರಳಲು ಅವಕಾಶ ನೀಡಿಲ್ಲ. ಈ ವೇಳೆ ಎರಡು ಗುಂಪಿನ ನಡುವೆ ಗಲಾಟೆಯಾಗಿದೆ. ಆಗ ಅಂಬರೇಶ್ ಕಡೆಯವರು ಈ ಗಲಾಟೆ ಕುರಿತು ಪ್ರಶ್ನಿಸಲು ಮುಂದಾದಾಗ, ಗಲಾಟೆ ತೀವ್ರ ಸ್ವರೂಪಕ್ಕೆ ತಿರುಗಿ ಅಂಬರೇಶ್​ ಸೇರಿದಂತೆ ಐದು ಜನರಿಗೆ ಚಾಕುವಿನಿಂದ ಇರಿಯಲಾಗಿದೆ.

ಓದಿ: ಬಿಜೆಪಿ ಮುಖಂಡನ ಸಂಬಂಧಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ; 'ಕೈ' ಕಟ್​​

ಚಾಕುವಿನಿಂದ ಹಲ್ಲೆ ಮಾಡಿರುವುದು 7 ಜನ ಎಂದು ತಿಳಿದು ಬಂದಿದೆ. ಈ ಏಳು ಜನ ಯಾರು? ಎನ್ನುವ ಗುರುತು ಪತ್ತೆಯಾಗಿದ್ದು, ಕೃತ್ಯ ಎಸಗಿರುವ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಪರಾರಿಯಾಗಿರುವ ಆರೋಪಿಗಳನ್ನ ಸೆರೆ ಹಿಡಿಯುವುದಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದ್ದು, ಆರೋಪಿಗಳನ್ನ ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.