ರಾಯಚೂರು: ಕಳೆದ 10 ವರ್ಷಗಳಿಂದ ದೇಶ ಸೇವೆಯಲ್ಲಿ ತೊಡಗಿರುವ ರಾಯಚೂರು ಜಿಲ್ಲೆಯ ಮಸ್ಕಿ ಮೂಲದ ವೀರಯೋಧರೊಬ್ಬರು ಹಿಮ ಪರ್ವತದಲ್ಲಿ ತನ್ನ ಹುಟ್ಟೂರಿನ ಹೆಸರು ಬರೆದು ಪ್ರೀತಿ ತೋರಿದ್ದಾರೆ.
ಜಿಲ್ಲೆಯ ಮಸ್ಕಿ ಮೂಲದ ವೀರಯೋಧ ಮನೋಜ್ ಕುಮಾರ್ ದೇಶದ ಸೈನ್ಯದಲ್ಲಿ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಭಾನುವಾರ (ನಿನ್ನೆ) ಮೈನಸ್ಸ್ 5 ಡಿಗ್ರಿ ಸೆಲ್ಸಿಯಸ್ ಇರುವ ಶ್ರೀನಗರದ ಹಿಮ ಪರ್ವತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವೇಳೆ ಹಿಮದ ಮೇಲೆ ‘ಮಸ್ಕಿ’ ಅಂತಾ ತಮ್ಮ ಹುಟ್ಟೂರಿನ ಹೆಸರು ಬರೆದಿದ್ದಾರೆ.
ಯೋಧ ಮನೋಜ್ ಕನ್ನಡ ಅಕ್ಷರದಲ್ಲಿ ಹಿಮದ ಮೇಲೆ ಬರೆದಿರುವ ಮಸ್ಕಿ ಹೆಸರಿನ ಮುಂದೆ ಫೋಟೋಗಳನ್ನ ತೆಗೆಸಿಕೊಂಡು ತನ್ನ ಹುಟ್ಟೂರಿನ ಪ್ರೀತಿ ಮರೆದಿದ್ದಾರೆ. ಈ ಪೋಟೋಗಳನ್ನ ತನ್ನ ಸ್ನೇಹಿತರಿಗೆ ಹಂಚಿಕೊಂಡಿದ್ದು, ತವರಿನ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಓದಿ: VIDEO ನೋಡಿ: ಆಳವಾದ ಬಾವಿಗೆ ಬಿದ್ದ ಮರಿ ಆನೆ.. ಕೊನೆಗೂ ಸಿಕ್ಕಿತು ರಕ್ಷಣೆ
ಇನ್ನು ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.