ETV Bharat / state

ಅದ್ಧೂರಿಯಾಗಿ ನೆರವೇರಿದ ಶ್ರೀರಾಘವೇಂದ್ರ ಸ್ವಾಮಿ ಮಹಾರಥೋತ್ಸವ.. ಸಾವಿರಾರು ಭಕ್ತರು ಭಾಗಿ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಹಾರಥೋತ್ಸವ ಅದ್ಧೂರಿಯಾಗಿ ನೆರವೇರಿತು.

Etv Bharat
Etv Bharat
author img

By ETV Bharat Karnataka Team

Published : Sep 2, 2023, 6:37 PM IST

ಅದ್ದೂರಿಯಾಗಿ ನೆರವೇರಿದ ಶ್ರೀರಾಘವೇಂದ್ರ ಸ್ವಾಮಿ ಮಹಾರಥೋತ್ಸವ

ರಾಯಚೂರು : ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಹಾರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಶ್ರೀರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಹಿನ್ನೆಲೆ ರಾಯರ ಉತ್ತಾರಾಧನೆ ಮಹೋತ್ಸವ ವೈಭವದಿಂದ ಜರುಗಿತು. ಮಹಾರಥೋತ್ಸವವು ನಾನಾ ವಾದ್ಯಗಳ ಮೇಳಗಳೊಂದಿಗೆ ನಡೆಯಿತು. ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಉತ್ಸವದಲ್ಲಿ ಭಾಗಿಯಾಗಿದ್ದವು. ಸಾವಿರಾರು ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು.

ಬೆಳಗ್ಗೆ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಕೈಂಕರ್ಯಗಳು ನಡೆದವು. ನಂತರ ಪಲ್ಲಕ್ಕಿಯಲ್ಲಿ ಪ್ರಹ್ಲಾದ್ ರಾಜರ ಉತ್ಸವ ಮೂರ್ತಿ ಗುರುಸಾರ್ವಭೌಮ ವಿದ್ಯಾಪೀಠಕ್ಕೆ ತೆರಳಿತು. ಅಲ್ಲಿ ಪೂಜೆ ನೆರವೇರಿದ ಬಳಿಕ ಪುನಃ ರಾಯರ ಮೂಲ ಬೃಂದಾವನ ಉತ್ಸವ ಮೂರ್ತಿ ಆಗಮಿಸಿತು. ಬಳಿಕ ಬೃಂದಾವನದಲ್ಲಿ ವಸಂತೋತ್ಸವವನ್ನು ಆಚರಿಸಲಾಯಿತು. ಈ ವೇಳೆ ಗುಲಾಲನ್ನು ರಾಯರ ಮೂಲಬೃಂದಾವನಕ್ಕೆ ಸಮರ್ಪಿಸಲಾಯಿತು. ನಂತರ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಭಕ್ತರಿಗೆ ಗುಲಾಲ್ ಎರಚಿದರು.

ಬಳಿಕ ಮಠದ ಆವರಣದಲ್ಲಿ ಉತ್ಸವ ಮೂರ್ತಿ ಪ್ರದಕ್ಷಿಣೆ ಹಾಕಿತು. ನಂತರ ಮಠದ ಮುಂಭಾಗದಲ್ಲಿದ್ದ ರಥದಲ್ಲಿ ಉತ್ಸವ ಮೂರ್ತಿಯನ್ನು ಇರಿಸಲಾಯಿತು. ಈ ವೇಳೆ ಪೀಠಾಧಿಪತಿಗಳು, ಆರಾಧನಾ ಮಹೋತ್ಸವಕ್ಕೆ ಬಂದ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು‌. ಮಠದ ರಥಬೀದಿಯಲ್ಲಿ ರಥವನ್ನೇರಿದ ಪ್ರಹ್ಲಾದ್‌ ರಾಜರು ರಾಜಗಂಭೀರವಾಗಿ ಸಾಗಿದರು. ಈ ವೇಳೆ ಶ್ರೀಪಾದಂಗಳವರು ಹೆಲಿಕಾಪ್ಟರ್ ಮೂಲಕ ಮಹಾರಥೋತ್ಸವಕ್ಕೆ ಪುಷ್ಪವೃಷ್ಠಿಗರೆದರು. ವಿವಿಧ ಭಾಗಗಳಿಂದಲೂ ಸಾವಿರಾರು ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದರು.

ಇದನ್ನೂ ಓದಿ : ರಾಯರ ಮಧ್ಯಾರಾಧನೆ: ಮಠದ ಪ್ರಾಂಗಣದಲ್ಲಿ ಚಿನ್ನದ ರಥೋತ್ಸವ- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.