ರಾಯಚೂರು : ಸಿಎಂ ವಿರುದ್ಧ ಶಾಸಕ ಶಿವನಗೌಡ ನಾಯಕ್ ಮತ್ತೊಮ್ಮೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಪಾದಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಹಾಸನಕ್ಕೆ 35 ಸಾವಿರ ಕೋಟಿ ಕೊಟ್ಟು, ಇಲ್ಲಿ ಮಲಗಲಿಕ್ಕೆ ಬರುತ್ತಿಯಾ? ’ಬಸ್ಗೆ ಜನ ಮುತ್ತಿಗೆ ಹಾಕಿದಾಗ ನೀವು ಮೋದಿ ವೋಟ್ ಹಾಕಿದ್ದೀರಾ ಅವರನ್ನ ಕೇಳಿ ಅಂತಾನೆ’ಇದೇನಾ ಸಿಎಂ ನಡೆದು ಕೊಳ್ಳುವ ರೀತಿ ಎಂದು ಆಕ್ರೋಶ ಹೊರಹಾಕಿದರು.
ಅಭಿವೃದ್ಧಿ ಆಗಿಲ್ಲ ಎಂದು ಪ್ರತಿಭಟನೆ ನಡೆಸಿದರೆ, ಸಮಸ್ಯೆ ಆಲಿಸುವುದು ಬಿಟ್ಟು ಬೇಕಾಬಿಟ್ಟಿ ಮಾತನಾಡುತ್ತಾರೆ. ಇದು ಸಿಎಂ ಲಕ್ಷಣವೇನು? ಡ್ರಾಮಾ ಯಾರು ಮಾಡುತ್ತಿದ್ದಾರೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಅದಕ್ಕೆ ಲೋಕಸಭೆಯಲ್ಲಿ 26 ಸ್ಥಾನ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರ ಇಲ್ಲವೆಂದರೆ ಪಕ್ಷದ ಶಾಸಕರು ಅಭಿವೃದ್ಧಿ ಮಾಡಬಾರದಾ ಎಂದು ಕಿಡಿಕಾರಿದರು.