ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಚಿಕ್ಕ ಹೊಸೂರು ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧ ಇಬ್ಬರು ಆರೋಪಿಗಳಿಗೆ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದಬೈಲೂರು ಶಂಕರ ರಾಮ ಅವರು ಜೀವಾವಧಿ ಶಿಕ್ಷೆ ಹಾಗೂ 1ಲಕ್ಷ ರೂ ದಂಡ ವಿಧಿಸಿದ್ದಾರೆ.
ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕ ಹೊಸೂರು ಗ್ರಾಮದಲ್ಲಿ 21-12-2015 ರಂದುಆರೊಪಿಗಳಾದ ಬಾಳಪ್ಪ ಹಾಗೂ ಆತನ ಹೆಂಡತಿಸೇರಿ ಅಜಿತ್ ಕುಮಾರ್ ಎನ್ನುವವನನ್ನು ಮನೆಗೆ ಹಾವು ಬಂದಿದೆ ಎಂದು ಕರೆಯಿಸಿ ಬಾಗಿಲು ಬಂದ್ ಮಾಡಿ ತೊಗರಿ ಹೊಟ್ಟು ಹಾಕಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದರು.
ಈ ಸಂಬಂಧ ಅಜಿತ್ ಕುಮಾರ್ ಅವರ ಸಹೋದರ ಮರಿಸ್ವಾಮಿ ಅವರು ನೀಡಿದ ದೂರಿನ ಆಧಾರದ ಮೇಲೆ ಹಟ್ಟಿ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ಬಗ್ಗೆ ಲಿಂಗಸುಗೂರಿನ ವೃತ್ತ ನಿರೀಕ್ಷಕ ವಿ.ಎಸ್.ಹಿರೇಮಠ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಸಾಕ್ಷಿ ಪುರಾವೆಗಳನ್ನು ಪರಿಶೀಲಿಸಿ ನ್ಯಾಯಾಧೀಶರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ದಂಡ ವಿಧಿಸಿ ಅದರಲ್ಲಿ 80 ಸಾವಿರ ಕೊಲೆಯಾದ ಅಜಿತ್ ಅವರ ಸಹೋದರರಿಗೆ ನೀಡಲು ಅದೇಶಹೊರಡಿಸಿದ್ದಾರೆ.
ಸರ್ಕಾರದ ಪರವಾಗಿ ಸಾರ್ವಜನಿಕ ಅಭಿಯೋಜಕ ಪಿ.ಎಕ್ಬಾಲ್ ವಾದ ಮಂಡಿಸಿದ್ದರು.