ETV Bharat / state

ರಾಯಚೂರು: ಮಳೆಗಾಲದೊಂದಿಗೆ ಶುರುವಾಗಿದೆ ಸಾಂಕ್ರಾಮಿಕ ರೋಗ ಭೀತಿ

ಕೋವಿಡ್ ಸಾಂಕ್ರಾಮಿಕ ಕಾಯಿಲೆ ನಡುವೆ ಮಳೆಗಾಲದ ಹಿನ್ನೆಲೆಯಲ್ಲಿ ಜನರನ್ನು ಡೆಂಗ್ಯೂ, ಮಲೇರಿಯಾ ಹಾಗೂ ಚಿಕನ್ ಗುನ್ಯಾದಂತಹ ಕಾಯಿಲೆಗಳು ಕಾಡುತ್ತಿವೆ.

author img

By

Published : Jun 17, 2020, 10:32 AM IST

raichur
raichur

ರಾಯಚೂರು: ಕೋವಿಡ್ ಸಾಂಕ್ರಾಮಿಕ ರೋಗದಿಂದ ಇಡೀ ರಾಜ್ಯವೇ ಆತಂಕದಲ್ಲಿದೆ. ಇದರ ನಡುವೆ ಮಳೆಗಾಲ ಶುರುವಾಗಿದೆ. ಸಹಜವಾಗಿಯೇ ಡೆಂಗ್ಯೂ, ಮಲೇರಿಯಾ ಸೇರಿದಂತೆ ನಾನಾ ಸಾಂಕ್ರಾಮಿಕ ಕಾಯಿಲೆಗಳ ಭೀತಿ ಜನರನ್ನು ಆವರಿಸಿದೆ.

ನಗರದಲ್ಲಿ ಚರಂಡಿ ಸ್ವಚ್ಛಗೊಳಿಸದೆ ಇರುವುದು ಹಾಗೂ ರಸ್ತೆಗಳ ಮೇಲೆ ಮಳೆ ನೀರು ನಿಲುಗಡೆಯಿಂದ ಸೂಳ್ಳೆಗಳು ಉತ್ತತ್ಪಿಯಾಗುತ್ತಿದ್ದು ಜನರ ಆತಂಕವನ್ನು ಹೆಚ್ಚಿಸುತ್ತಿದೆ.

ರಾಯಚೂರಿನಲ್ಲಿ ಸಾಂಕ್ರಾಮಿಕ ರೋಗದ ಭೀತಿ

ರಾಯಚೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರವೇಶವಾಗುವ ಮುನ್ನ ಅಕಾಲಿಕ ಮಳೆ ಸುರಿದಿತ್ತು. ಹೀಗಾಗಿ ಚರಂಡಿಯಲ್ಲಿರುವ ಕೊಚ್ಚೆ, ಕೊಳಚೆ ನೀರು ರಸ್ತೆ ಮೇಲೆ ಬಂದಿದೆ. ಮನೆಗಳಿಗೂ ಚರಂಡಿ ನೀರು ನುಗ್ಗಿದ್ದವು. ನಗರ, ಪಟ್ಟಣ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶಗಳ ರಸ್ತೆಗಳ ಮೇಲೆ, ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ಮಳೆ ನೀರು ನಿಂತಿರುವ ದೃಶ್ಯಗಳು ಕಾಣಸಿಗುತ್ತಿವೆ. ಹೀಗೆ ಮಳೆ ನೀರು ನಿಂತಿರುವ ಸ್ಥಳದಲ್ಲಿ ಸೂಳ್ಳೆಗಳ ಜನನವಾಗುತ್ತಿದೆ.

ಕಳೆದ ವರ್ಷ 2019ರಲ್ಲಿ 1,076 ಜನರಿಗೆ ಡೆಂಗ್ಯೂ ಲಕ್ಷಣ ಕಂಡು ಬಂದಿದ್ದು, ಅದರಲ್ಲಿ 61 ಜನರಿಗೆ ಡೆಂಗ್ಯೂ ಇರುವುದು ದೃಢಪಟ್ಟಿತ್ತು. 68 ಜನರಲ್ಲಿ ಚಿಕನ್ ಗುನ್ಯಾ ಲಕ್ಷಣ ಕಂಡು ಬಂದ್ರೆ, ಒಬ್ಬರಲ್ಲಿ ಚಿಕನ್ ಗುನ್ಯ ಕಾಣಿಸಿತ್ತು. 25 ಜನರಿಗೆ ಮಲೇರಿಯಾ ಕಾಯಿಲೆ ತಗುಲಿತ್ತು.

ಕಳೆದ ಜನವರಿಯಿಂದ ಜಿಲ್ಲೆಯಲ್ಲಿ 368 ಜನರಲ್ಲಿ ಡೆಂಗ್ಯೂ ಲಕ್ಷಣ ಗೋಚರಿಸಿದ್ದು, ಅದರಲ್ಲಿ 25 ಜನರಿಗೆ ಡೆಂಗ್ಯೂ ಇರುವುದು ದೃಢಪಟ್ಟಿದೆ. 36 ಜನರಲ್ಲಿ ಚಿಕನ್ ಗುನ್ಯಾ ಲಕ್ಷಣ ಕಂಡುಬಂದಿದೆ. ಇದುವರೆಗೆ 1 ಮಲೇರಿಯಾ ಪ್ರಕರಣ ದಾಖಲಾಗಿದೆ.

ಹೀಗಾಗಿ, ಕೊರೊನಾ ವೈರಸ್ ನಿಯಂತ್ರಣದ ಜತೆಯಲ್ಲಿ ಈ ಸಾಂಕ್ರಾಮಿಕ ಕಾಯಿಲೆಗಳ ತಡೆಯುವಿಕೆಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ತುರ್ತಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.