ರಾಯಚೂರು: ಕೊರೊನಾ ಸೋಂಕಿತ ಮಹಿಳೆ ಸೇರಿದಂತೆ ಆಕೆಯ ಕುಟುಂಬಸ್ಥರನ್ನ ಕ್ವಾರಂಟೈನ್ ಕರೆದುಕೊಂಡು ಹೋಗುವಂತೆ ಮಾನ್ವಿ ಪಟ್ಟಣದ ನಿವಾಸಿಗಳು ಒತ್ತಾಯಿಸಿದ್ದಾರೆ.
ಪಟ್ಟಣದ ರಾಜೀವ್ ಗಾಂಧಿ ಬಡಾವಣೆ ನಿವಾಸಿಯಾಗಿರುವ 20 ವರ್ಷದ ಮಹಿಳೆಯು ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದರು. ಮಹಾರಾಷ್ಟ್ರದಿಂದ ಮರಳಿದ ಬಳಿಕ ಅವರನ್ನ 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಅವರನ್ನ ಬಿಡುಗಡೆ ಮಾಡಲಾಗಿತ್ತು. ಆದ್ರೆ ಬಿಡುಗಡೆಯಾದ ಬಳಿಕ ನಿನ್ನೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಹೀಗಾಗಿ ಆ ಮಹಿಳೆಯನ್ನ ಐಸೋಲೋಷನ್ ವಾರ್ಡ್ಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಲು ತಾಲೂಕು ಆಡಳಿತ ಮುಂದಾಗಿದೆ. ಆದ್ರೆ ಮಹಿಳೆ ಸೇರಿದಂತೆ ಆಕೆಯನ್ನ ಕುಟುಂಬಸ್ಥರನ್ನ ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗಬೇಕು. ಯಾಕೆಂದರೆ, ಬಿಡುಗಡೆ ಹೊಂದಿದ್ದ ಬಳಿಕ ಮನೆಯಲ್ಲಿರುವುದರಿಂದ ಮಹಿಳೆಯ ಕುಟುಂಬಸ್ಥರು ಸೋಂಕು ಹರಡಿರುವ ಸಾಧ್ಯತೆಯಿದೆ. ಸೋಂಕಿತ ಮಹಿಳೆ ಜತೆಯಲ್ಲಿ ಕುಟುಂಬಸ್ಥರನ್ನ ಕರೆದುಕೊಂಡು ಹೋಗುವಂತೆ ತಾಲೂಕು ಆಡಳಿತಕ್ಕೆ ಬಡಾವಣೆ ಜನರು ಒತ್ತಾಯಿಸಿದ್ದಾರೆ.
ಸೋಂಕಿತ ಮಹಿಳೆಯನ್ನು ಕರೆದುಕೊಂಡು ಹೋಗಲಾಗುತ್ತದೆ ಎಂದು ಹೇಳಿದಾಗ, ಬಡಾವಣೆ ಜನರು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಸೋಂಕಿತ ಮಹಿಳೆಯಿಂದ ಮಾನ್ವಿ ಪಟ್ಟಣದ ಜನರಿಗೆ ಆತಂಕ ಸೃಷ್ಟಿಯಾಗಿದ್ದು, ಸೋಂಕಿತ ಮಹಿಳೆಯನ್ನ ಕ್ವಾರಂಟೈನ್ ಮಾಡುವಂತೆ ಒತ್ತಾಯಿಸಿದ್ದಾರೆ.