ETV Bharat / state

ಲೋಕಕಲ್ಯಾಣಕ್ಕಾಗಿ ಪಾದಯಾತ್ರೆ, ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಅಲ್ಲ: ಶ್ರೀಶೈಲ ಜಗದ್ಗುರು

ವೀರಶೈವ ಲಿಂಗಾಯತ ಪ್ರತ್ಯೇಕ ಅಲ್ಲ. ಹಿಂದೂ ಧರ್ಮದ ಸಾಕಷ್ಟು ಅಂಶಗಳನ್ನು ಅನುಸರಿಸುತ್ತಿದ್ದೇವೆ. ಬಹುತೇಕ ರುದ್ರಾಕ್ಷಿ, ವಿಭೂತಿ ಧರಿಸುತ್ತೇವೆ. ಶಿವನ ಆರಾಧನೆ ಮಾಡ್ತೇವೆ. ವೀರಶೈವ ಒಂದು ಧರ್ಮ ಅಂತಾ ಕರೆಯುತ್ತಿದ್ದರೂ ಅದು ಹಿಂದೂ ಧರ್ಮದಿಂದ ಪ್ರತ್ಯೇಕ ಧರ್ಮ ಅಲ್ಲ. ಅದನ್ನ ಅರಿಯಬೇಕು ಎಂದು ಪಂಚಪೀಠ ಶ್ರೀಶೈಲ ಶಿವಾಚಾರ್ಯ ಶ್ರೀ ಹೇಳಿದ್ದಾರೆ.

Channasiddharama Panditaradhya Shivacharya Shri
ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ
author img

By

Published : Nov 18, 2022, 5:23 PM IST

ರಾಯಚೂರು: ಮನುಕುಲದ ಒಳಿತಿಗಾಗಿ ಹಾಗೂ ಲೋಕಕಲ್ಯಾಣಾರ್ಥ, ಧರ್ಮದ ಜಾಗೃತಿಗಾಗಿ ಯಡೂರಿನಿಂದ ಶ್ರೀಶೈಲದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಂಚಪೀಠದ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ರಾಯಚೂರು ನಗರಕ್ಕೆ ಪಾದಯಾತ್ರೆ ತಲುಪಿದ್ದು, ಶುಕ್ರವಾರ ಪುನಃ ಪಾದಯಾತ್ರೆ ಆರಂಭಿಸುವ ಮುನ್ನ ಮಾಧ್ಯಮದವರ ಜತೆಗೆ ಶ್ರೀಗಳು ಮಾತನಾಡಿದರು. ಪಾದಯಾತ್ರೆ ಆರಂಭಿಸಿ ಇಂದಿಗೆ 22ನೇ ದಿನ ಮುಗಿದಿದೆ. 600 ಕಿ.ಮಿ.ವರೆಗೆ ಪಾದಯಾತ್ರೆ ಮಾಡಲಿದ್ದೇವೆ. ಶ್ರೀಶೈಲ ಕ್ಷೇತ್ರವೂ ಪಾದಯಾತ್ರೆಗಳಿಂದ ಪ್ರಸಿದ್ದಿ ಪಡೆದ ಪುಣ್ಯ ಕ್ಷೇತ್ರ. ಜ್ಯೋತಿರ್ಲಿಂಗ ದರ್ಶನಕ್ಕಾಗಿ ಶ್ರೀಶೈಲಕ್ಕೆ ಬರುವ ಭಕ್ತರು ಬಹಷ್ಟಿದ್ದಾರೆ. ಪಾದಯಾತ್ರೆ ಮೂಲಕ ಬರುವ ಭಕ್ತರು ಜಾತ್ರೆ ಮುಗಿಸಿ ವಾಪಸ್​ ಆಗುತ್ತಾರೆ ಎಂದರು.

ಜಾಗೃತಿಗಾಗಿ ಪಾದಯಾತ್ರೆ: ಭಕ್ತರ ಕಷ್ಟಗಳನ್ನು ತಿಳಿಯಲು ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಇದು ನಿಮಿತ್ತ ಮಾತ್ರ ಪಾದಯಾತ್ರೆ ಆಗದೇ ಧರ್ಮ ಜಾಗೃತಿ ಆಗಬೇಕು ಎಂಬ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ. ಹಲವಾರು ವಿಷಯಗಳನ್ನು ಪಾದಯಾತ್ರೆ ಪಟ್ಟಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ವ್ಯಸನ ಮುಕ್ತ ಸಮಾಜ ನಿರ್ಮಾಣ, ವಾಸ್ತವ್ಯ ಇರೋ ಗ್ರಾಮಗಳಲ್ಲಿ ಲಿಂಗದೀಕ್ಷೆ ನೀಡಲಾಗುತ್ತಿದೆ.

ಅಲ್ಲದೇ ಪಾದಯಾತ್ರೆ ಸಾಗುವ ಕಡೆಗಳಲ್ಲೆಲ್ಲ ಸಸಿ ನೆಡುವ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಹಿಂದಿನ ಅಕ್ಟೋಬರ್ 29ರಿಂದ ಪಾದಯಾತ್ರೆ ಆರಂಭ ಮಾಡಲಾಗಿದೆ. ಜನ ಇಷ್ಟು ಖುಷಿಯಿಂದ ಬರಮಾಡಿಕೊಳ್ತಾರೆ ಅನ್ನುವ ನಿರೀಕ್ಷೆ ನಮಗೆ ಇರಲಿಲ್ಲ. ಪ್ರಚಾರ ಅಥವಾ ಯಾವುದೇ ಬೇಡಿಕೆ ಇಲ್ಲದಿರುವ ಮಾಡಿರೋ ಪಾದಯಾತ್ರೆ ಇದಾಗಿದೆ ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಧರ್ಮ ಪ್ರತ್ಯೇಕ ಅಲ್ಲ:ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಪ್ರಕ್ರಿಯೆ ನೀಡಿದವರು, ವೀರಶೈವ ಲಿಂಗಾಯತ ಧರ್ಮ ಪ್ರತ್ಯೇಕ ಅಲ್ಲ. ಹಿಂದೂ ಧರ್ಮದ ಸಾಕಷ್ಟು ಅಂಶಗಳನ್ನು ನಾವು ಅನುಸರಿಸುತ್ತಿದ್ದೇವೆ. ಬಹುತೇಕ ರುದ್ರಾಕ್ಷಿ, ವಿಭೂತಿ ಧರಿಸ್ತೇವೆ, ಶಿವನ ಆರಾಧನೆ ಮಾಡುತ್ತೇವೆ. ವೀರಶೈವ ಒಂದು ಧರ್ಮ ಅಂತಾ ಕರಿತಿದ್ರೂ, ಅದು ಹಿಂದೂ ಧರ್ಮದಿಂದ ಪ್ರತ್ಯೇಕ ಧರ್ಮ ಅಲ್ಲ. ಅದನ್ನ ನಾವು ಅರಿಯಬೇಕು ಎಂದರು.

ಕೆಲ ಮಠಾದೀಶರು ಮೀಸಲಾತಿಗೆ ಹೋರಾಟ ನಡೆಸ್ತಿರುವ ವಿಚಾರ, ಎಲ್ಲ ಶ್ರೀಗಳು ತಮ್ಮ ತಮ್ಮ ಸಮಾಜದ ಸೌಲಭ್ಯಕ್ಕಾಗಿ ಕೇಳ್ತಿದ್ದಾರೆ. ವಿನಃ ಒಂದೇ ಸಮುದಾಯಕ್ಕೆ ಎಂದು ಅಲ್ಲ, ಎಲ್ಲ ಸಮುದಾಯಗಳು ಕೇಳ್ತಿವೆ. ಕಾನೂನು ಬದ್ಧವಾಗಿ, ನ್ಯಾಯೋಚಿತ ಎಲ್ಲ ಸಮುದಾಯಗಳ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಇದನ್ನೂಓದಿ:ಶಾಲಾ ಕಟ್ಟಡ ನಿವೇಶನಕ್ಕೆ ಅಕ್ಷರ ಜೋಳಿಗೆ ಹಿಡಿದ ಸೊನ್ನದ ಶ್ರೀಮಠದ ಶ್ರೀಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.