ETV Bharat / state

ಕೋಮು ಸೌರ್ಹದತೆಯ ಲಿಂಗಸೂಗೂರಿನ ರಾಮ್-ರಹೀಮ್ ಗಣಪ.. ಮುಸ್ಲಿಮರಲ್ಲೇ ಹೆಚ್ಚಿನ ಸಂಭ್ರಮ! - ಮುಸ್ಲಿಮರಲ್ಲೇ ಹೆಚ್ಚಿನ ಸಂಭ್ರಮ!

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ-ಆಚರಣೆಗಳು ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ ಎಂಬುದಕ್ಕೆ ಲಿಂಗಸೂಗೂರಿನ ರಾಮ್-ರಹೀಮ್ ಯುವಕ ಮಂಡಳ ಸ್ಥಾಪಿಸಲ್ಪಟ್ಟಿರುವ ರಾಮ್-ರಹೀಮ್ ಗಣಪತಿಯೇ ಸಾಕ್ಷಿ.

ಕೋಮು ಸೌರ್ಹದತೆಯ ಲಿಂಗಸೂಗೂರಿನ ರಾಮ್-ರಹೀಮ್ ಗಣಪ
author img

By

Published : Sep 4, 2019, 7:07 PM IST

ರಾಯಚೂರು: ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ-ಆಚರಣೆಗಳು ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ ಎಂಬುದಕ್ಕೆ ಲಿಂಗಸೂಗೂರಿನ ರಾಮ್-ರಹೀಮ್ ಯುವಕ ಮಂಡಳ ಸ್ಥಾಪಿಸಲ್ಪಟ್ಟಿರುವ ರಾಮ್-ರಹೀಮ್ ಗಣಪತಿಯೇ ಸಾಕ್ಷಿ.

ಕೋಮು ಸೌರ್ಹದತೆಯ ಲಿಂಗಸೂಗೂರಿನ ರಾಮ್-ರಹೀಮ್ ಗಣಪ..

ದೇವರು ಅನ್ನೋದು ನಂಬಿಕೆ. ನಂಬಿಕೆ ಅನ್ನೋದೇ ಶಕ್ತಿ, ಅದೇ ಭಕ್ತಿ. ಒಂದೊಂದು ಧರ್ಮದಲ್ಲಿ ಒಂದೊಂದು ರೀತಿಯಲ್ಲಿ ಭಕ್ತಿ, ನಂಬಿಕೆಗಳಿರುತ್ತವೆ. ಆದರೆ, ಧ್ಯೇಯ ಒಂದೇ ಅಲ್ವೇ.. ಅದನ್ನ ಲಿಂಗಸೂಗೂರಿನ ಪಟ್ಟಣದ ಪುರಸಭೆ ಆವರಣದ ಉದ್ಯಾನವನದಲ್ಲಿ ಸ್ಥಾಪಿಸಲಾಗಿರುವ ರಾಮ್-ರಹೀಮ್ ಗಣಪತಿ ಸಾರಿ ಸಾರಿ ಹೇಳುತ್ತಿದೆ. ಕೋಮು ಸೌಹಾರ್ದಕ್ಕೆ ಈ ಗಣಪ ಒಂದ್ರೀತಿ ಮುನ್ನುಡಿ ಬರೆಯುತ್ತಿದ್ದಾನೆ.

ರಾಮ್-ರಹೀಮ್ ಯುವಕ ಮಂಡಳಿಯಲ್ಲಿ ಮುಸ್ಲಿಂ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿರೋದು ಮತ್ತೊಂದು ವಿಶೇಷವೇ ಸರಿ. ಹಿಂದೂ ಸಂಪ್ರದಾಯದ ಹಬ್ಬಗಳನ್ನೂ ಕೂಡ ಆಚರಿಸುತ್ತಾ ತಮ್ಮ ಸೌಹಾರ್ದತೆಯನ್ನ, ಸಹೃದಯ ಗುಣವನ್ನೇ ಇಡೀ ನಾಡಿಗೆ ತಿಳಿಸುತ್ತಿದ್ದಾರೆ. ಯಾರೋ ಕಿಡಿಗೇಡಿಗಳಿಂದ ಧರ್ಮಗಳ ನಡುವೆ ನಡೆಯುವ ಘರ್ಷಣೆಗಳಿಂದ ಹೊರಬಂದು ಈ ರೀತಿ ಕೋಮು ಸಾಮರಸ್ಯದ ಭಾವನೆ ಬೆಳೆಸಿಕೊಳ್ಳುವುದು ನಿಜಕ್ಕೂ ಒಳ್ಳೇಯ ಬೆಳವಣಿಗೆ. ಈ ರೀತಿಯ ಮನೋಭಾವ ಹೆಚ್ಚೆಚ್ಚು ಬೆಳಯಬೇಕಾಗಿದೆ. ಆಗ ಸಮಾಜದಲ್ಲಿನ ಸೋದರತೆ, ಸಾಮರಸ್ಯ ಬೆಳೆಯುತ್ತೆ ಅಂತಾರೆ ಇಲ್ಲಿನ ಪಿಎಸ್​ಐ ಪ್ರಕಾಶ ಡಂಬಳ.

ಈಶ್ವರ ಅಲ್ಲಾ ತೇರೆ ನಾಮ್‌ ಸಬ್ಕೋ ಸನ್ಮತಿ ದೇ ಭಗವಾನ್‌ ಅಂತಾ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯೂ ಕೂಡ ಪದೇಪದೆ ಹಾಡುತ್ತಿದ್ದರು. ಹಿಂದೂ- ಮುಸ್ಲಿಂ ಬಾಂಧವರು ಒಟ್ಟೊಟ್ಟಾಗಿ ಗಣೇಶ ಹಬ್ಬ ಆಚರಿಸುವ ಮೂಲಕ ಗಾಂಧಿ ಕಂಡ ಕನಸನ್ನ ನನಸು ಮಾಡ್ತಿದಾರೆ. ಜಾತಿ, ಧರ್ಮಗಳ ಹಂಗಿರದೇ ಒಂದಾಗಿ ಬಾಳ್ತಿದಾರೆ. ಇತರ ಯುವಕರಿಗೂ ಇವರ ನಡೆ ಆದರ್ಶಪ್ರಾಯ.

Intro:ಸ್ಲಗ್: ಕೋಮು ಸೌರ್ಹದತೆ ಸಾರುವ ರಾಮ್-ರಹೀಮ್ ಗಣಪತಿ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 04-೦9-2019
ಸ್ಥಳ: ರಾಯಚೂರು
ಆಂಕರ್: ನಾಡಿನೆಲ್ಲಡೆ ಗಣೇಶ ಚತುರ್ಥಿ ಹಬ್ಬ ಸಂಭ್ರಮ ಮನೆ ಮಾಡಿದ್ದು, ಸಂಘ-ಸಂಸ್ಥೆಗಳು, ಯುವಕ ಮಂಡಳಿಗಳು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸಂಭ್ರಮದಿಂದ ಹಬ್ಬ ಆಚರಣೆ ಮಾಡುತ್ತಿವೆ. ಇತ್ತ ರಾಯಚೂರು ಜಿಲ್ಲೆಯ ಗಣೇಶ ಹಬ್ಬ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ರಾಮ್-ರಹೀಮ್ ಯುವಕ ಮಂಡಳಿಯಿಂದ ಸ್ಥಾಪನೆ ಮಾಡಿರುವ ಗಣೇಶ ಮೂರ್ತಿ ಆಕರ್ಷಿಯ ಕೇಂದ್ರವಾಗಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Body:ವಾಯ್ಸ್ ಓವರ್.1: ಭಾರತೀಯ ಸಂಸ್ಕೃತಿಯ ಆಚರಿಸುವ ಪೂಜೆ-ಪುನಾಸ್ಕರುಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ ಎನ್ನುವುದಕ್ಕೆ ರಾಯಚೂರು ಜಿಲ್ಲೆಯ ಸಾಬೀತು ಆಗಿದೆ. ಹೌದು, ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ಪುರಸಭೆ ಕಚೇರಿ ಬಳಿಯ ಉದ್ಯಾನವನದ ಬಳಿ ಹಿಂದೂ-ಮುಸ್ಲಿಂ ಬಾಂಧವರು ಸೇರಿಕೊಂಡು ರಾಮ್-ರಹೀಮ್ ಯುವಕ ಮಂಡಳಿಯಿಂದ ಗಣಪನ ಮೂರ್ತಿಯನ್ನ ಸ್ಥಾಪಿಸುವ ಮೂಲಕ ಕೋಮು ಸೌರ್ಹದತೆ ಮೆರಿದ್ದಾರೆ.
ವಾಯ್ಸ್ ಓವರ್.2: ವಿಘ್ನ ನಿವಾರವಕನಿಗೆ ಹಬ್ಬವಾದ ಗಣೇಶ ಚತುರ್ಥಿಯಲ್ಲಿ ಹಿಂದೂ ಧರ್ಮದವರು ಹಲವು ನಾಮಕಿಂತಗಳಿಗೆ ಕರೆಯಲ್ಪಾಡವ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೇರವೇರಿಸಿ ಪೂಜಿಸಲಾಗುತ್ತದೆ. ಈ ಬಾರಿ ಲಿಂಗಸೂಗೂರು ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಕೋಮ ಸೌಹರ್ದತೆಯ ಸಾರುವ ನಿಟ್ಟಿನಲ್ಲಿ ಗಣೇಶ ಮೂರ್ತಿಯನ್ನ ಸ್ಥಾಪಿಸಿ, ಪೂಜಿಸುತ್ತಿರುವುದು ವಿಶೇಷವಾಗಿ ಗಮನ ಸೆಳೆಯುತ್ತಿದೆ.
ವಾಯ್ಸ್ ಓವರ್.3: ಇನ್ನೂ ರಾಮ್-ರಹೀಮ್ ಯುವಕ ಮಂಡಳಯಲ್ಲಿ ಮುಸ್ಲಿಂ ಬಾಂಧವರು ಹೆಚ್ಚುಯಿದ್ದು, ಹಿಂದೂ ಸಂಪ್ರದಾಯದ ಹಬ್ಬಗಳನ್ನ ಸಹ ಆಚರಿಸುವ ಮೂಲಕ ಜಾತ್ಯಾತೀತ ಮನೋಭಾವ ಜತೆಗೆ ಕೋಮ ಸೌರ್ಹದತೆ ಸಾರುವ ನಿಟ್ಟಿನಲ್ಲಿ ತೆಗೆದುಕೊಂಡು ನಿರ್ಧಾರಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಭಕ್ತಿಯಿಂದ ಯಾವುದೇ ಆಚರಣೆ ಮಾಡುವುದಕ್ಕೆ ಜಾತಿ-ಭೇಧವಿಲ್ಲವೆನ್ನುವುದು ಸಂದೇಶ ಪಸರಿಸಿರುವುದು ವಿಶೇಷ.
Conclusion:ಬೈಟ್.1: ಪ್ರಕಾಶ ಡಂಬಳ, ಪಿಎಸ್ಐ, ಲಿಂಗಸೂಗೂರು
ಬೈಟ್.2: ಶಿವರಾಜ್ ನಾಯಕ, ಸ್ಥಳೀಯ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.