ETV Bharat / state

ಅತೃಪ್ತ ಶಾಸಕರುಗಳ ರಾಜೀನಾಮೆಗೆ ಅವರ ನಾಯಕರೇ ಕಾರಣ.. ಸಂಸದ ರಾಜಾ ಅಮರೇಶ್ವರ ನಾಯಕ

author img

By

Published : Jul 14, 2019, 8:51 PM IST

ಮೈತ್ರಿ ಸರ್ಕಾರದಲ್ಲಿ ಕೆಲವೇ ವ್ಯಕ್ತಿಗಳ ಅಧಿಕಾರ ನಡೆಯುತ್ತದೆ ಎಂದು ಅತೃಪ್ತ ಶಾಸಕರೇ ತಿಳಿಸಿದ್ದು, ಅದೇ ಅವರ ರಾಜೀನಾಮೆಗೆ ಕಾರಣವಾಗಿರಬಹುದು. ಇದರಲ್ಲಿ ಬಿಜೆಪಿಯ ಯಾವುದೇ ಕೈವಾಡವಿಲ್ಲ ಎಂದು ಬಿಜೆಪಿ ಸಂಸದ ರಾಜಾ ಅಮರೇಶ್ವರ ನಾಯಕ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಸಂಸದ ರಾಜಾ ಅಮರೇಶ್ವರ ನಾಯಕ

ರಾಯಚೂರು: ರಾಯಚೂರು-ಯಾದಗಿರಿ ಜಿಲ್ಲೆಯಲ್ಲಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರುಗಳಲ್ಲೂ ಮೈತ್ರಿ ಸರ್ಕಾರದ ಮೇಲೆ ಅಸಮಾಧಾನವಿದೆ ಎಂದು ರಾಯಚೂರು ಬಿಜೆಪಿ ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದ್ದಾರೆ.

ಬಿಜೆಪಿ ಸಂಸದ ರಾಜಾ ಅಮರೇಶ್ವರ ನಾಯಕ

ಜಿಲ್ಲೆಯ ಲಿಂಗಸ್ಗೂರು ಪಟ್ಟಣದಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ರಾಯಚೂರು-ಯಾದಗಿರಿ ಜಿಲ್ಲೆಯ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅದು ನಿಜ, ನನ್ನ ಬಳಿ ಮೈತ್ರಿ ಸರ್ಕಾರದ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ.

ಶಾಸಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹತ್ತು ಹಲವು ಬೇಡಿಕೆಗಳಿಗೆ ಸರ್ಕಾರ ಸೂಕ್ತ ಸ್ಪಂದನೆ ನೀಡುತ್ತಿಲ್ಲ. ಮೈತ್ರಿ ಸರ್ಕಾರದಲ್ಲಿ ಕೆಲ ವ್ಯಕ್ತಿಗಳದ್ದೇ ಅಧಿಕಾರ ನಡೆಯುತ್ತದೆ ಅಂತಾ ಹೇಳಿದ್ದಾರೆ‌. ರಾಜ್ಯದ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಶಾಸಕರ ರಾಜೀನಾಮೆ ಸಲ್ಲಿಕೆ ಅವರ ಆಂತರಿಕ ವಿಚಾರವಾಗಿದ್ದು, ಇದರಲ್ಲಿ ಬಿಜೆಪಿ ಕೈವಾಡವಿಲ್ಲ.

ಅವರಿಗೆ ಅಲ್ಲಿ ಗೌರವವಿಲ್ಲವೆಂದು ಅಸಮಧಾನಗೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅತೃಪ್ತರು ಹೇಳಿಕೆ ನೀಡಿದ್ದಾರೆ. ಅದು ಅವರ ಆಂತರಿಕ ವಿಚಾರವಾಗಿದೆ. ಈಗಂತೂ ಬಿಜೆಪಿ ಯಾವುದೇ ಕೈವಾಡವಿಲ್ಲ. ಮುಂದಿನ ಬೆಳವಣಿಗೆ ಬಗ್ಗೆ ನಾವು‌ ಏನೂ ಹೇಳುವುದಕ್ಕೆ ಆಗಲ್ಲ ಎಂದರು.

Intro:ಸ್ಲಗ್: ಬಿಜೆಪಿ ಸಂಸದ ಹೇಳಿಕೆ
ಫಾರ್ಮೇಟ್: ಎವಿಬಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೪-೦೭-೨೦೧೯
ಸ್ಥಳ: ರಾಯಚೂರು

ಆಂಕರ್: ರಾಯಚೂರು-ಯಾದಗಿರಿ ಜಿಲ್ಲೆಯ ಕಾಂಗ್ರೆಸ್-ಜೆಡಿಎಸ್ ಶಾಸಕರ ಮೈತ್ರಿ ಸರಕಾರದ ಮೇಲೆ ಅಸಮಾಧಾನವಿದೆ ಎಂದು ಬಿಜೆಪಿ ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದ್ದಾರೆ.Body:ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರದ ರಾಯಚೂರು-ಯಾದಗಿರಿ ಜಿಲ್ಲೆಯ ಶಾಸಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅದು ನಿಜ, ನನ್ನ ಬಳಿ ಮೈತ್ರಿ ಸರಕಾರದ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ. ಶಾಸಕರ ಹತ್ತು ಹಲವು ಬೇಡಿಕೆಗಳಿಗೆ ಸರಕಾರ ಸೂಕ್ತ ಸ್ಪಂದನೆ ನೀಡುತ್ತಿಲ್ಲ. ಮೈತ್ರಿ ಸರ್ಕಾರದಲ್ಲಿ ಕೆಲವೇ ವ್ಯಕ್ತಿಗಳದ್ದೇ ಅಧಿಕಾರ ನಡೆಯುತ್ತದೆ ಅಂತಾ ಹೇಳಿದ್ದಾರೆ‌. ಇನ್ನು ರಾಜ್ಯದ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಶಾಸಕರ ರಾಜೀನಾಮೆ ಸಲ್ಲಿಕೆ ಅವರ ಆಂತರಿಕ ವಿಚಾರವಾಗಿದ್ದು, ಇದರಲ್ಲಿ ಬಿಜೆಪಿ ಕೈವಾಡವಿಲ್ಲ. ಅವರಿಗೆ ಅಲ್ಲಿ ಗೌರವವಿಲ್ಲವೆಂದು ಅಸಮಧಾನಗೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅತೃಪ್ತರು ಹೇಳಿಕೆ ನೀಡಿದ್ದು, ಅದು ಅವರ ಆಂತರಿಕ ವಿಚಾರವಾಗಿದೆ. ಈಗಂತು ಬಿಜೆಪಿಯ ಯಾವುದೇ ಕೈವಾಡವಿಲ್ಲ. ಮುಂದಿನ ಬೆಳವಣಿಗೆ ನಾವು‌ ಏನು ಹೇಳುವುದಕ್ಕೆ ಆಗಲ್ಲ ಎಂದರು.Conclusion:ಬೈಟ್.೧: ರಾಜಾ ಅಮರೇಶ್ವರ ನಾಯಕ, ಬಿಜೆಪಿ ಸಂಸದ, ರಾಯಚೂರು

For All Latest Updates

TAGGED:

Byte
ETV Bharat Logo

Copyright © 2024 Ushodaya Enterprises Pvt. Ltd., All Rights Reserved.