ETV Bharat / state

ಸಿಗದ ಸಮರ್ಪಕ ಆರೋಗ್ಯ ಸೇವೆ: ಶುಶ್ರೂಷಕಿಯರನ್ನೇ ಆಶ್ರಯಿಸಿರುವ ರಾಯಚೂರು ಸರ್ಕಾರಿ ಆಸ್ಪತ್ರೆಗಳು

author img

By

Published : Oct 1, 2020, 6:42 PM IST

ಬಿಸಿಲೂರು ರಾಯಚೂರಿನ ಕೊಳಗೇರಿ ನಿವಾಸಿಗಳಿಗೆ ಸರಿಯಾಗಿ ಸೂಕ್ತ ರೀತಿಯಲ್ಲಿ ಆರೋಗ್ಯ ಸೇವೆ ದೊರೆಯುತ್ತಿಲ್ಲ ಎಂಬ ಮಾತುಗಳು ನಗರಲ್ಲಿ ಕೇಳಿ ಬರುತ್ತಿವೆ. ಅಲ್ಲದೇ ಇರುವ ಆಸ್ಪತ್ರೆಗಳಲ್ಲಿ ವೈದ್ಯರು ಸರಿಯಾದ ಸಮಯಕ್ಕೆ ಸಿಗದೇ ರೋಗಿಗಳು ಶುಶ್ರೂಷಕಿಯರ ಮೇಲೆ ಅವಲಂಬಿತವಾಗಬೇಕಾಗಿದೆ.

raichuru-slum-residents-not-getting-adequate-health-service
ಆರೋಗ್ಯ ಸೇವೆ

ರಾಯಚೂರು: ಸರ್ಕಾರ ನಗರ ಪ್ರದೇಶದ ಕೊಳಗೇರಿ ನಿವಾಸಿಗಳಿಗೆ ಸೂಕ್ತವಾದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನ ತೆರೆದಿದ್ದರೂ ಅಲ್ಲಿ ವೈದ್ಯರಿಗಿಂತ ಹೆಚ್ಚಾಗಿ ಶುಶ್ರೂಷಕಿಯರ ಮೇಲೆ ಹೆಚ್ಚು ಅವಲಂಬಿತ ವಾಗಬೇಕಿದೆ.

ನಗರದಲ್ಲಿ ಒಟ್ಟು 5 ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್​ಸಿ)ಗಳನ್ನ ಸ್ಥಾಪಿಸಲಾಗಿದೆ. ಹರಿಜನವಾಡ, ಜಹಿರಾಬಾದ್, ಎಲ್​ಬಿಎಸ್ ನಗರ ಸೇರಿದಂತೆ 5 ಪಿಎಚ್​ಸಿಗಳಿವೆ. ಈ ಐದರಲ್ಲಿ ನಾಲ್ವರು ವೈದ್ಯರಿದ್ದು, ಒಂದು ವೈದ್ಯರ ಹುದ್ದೆ ಖಾಲಿಯಿದೆ. ಸಿಬ್ಬಂದಿ, ಶುಶ್ರೂಷಕಿಯರ ಕೊರತೆ ಇಲ್ಲ.

ಶುಶ್ರೂಷಕಿಯರ ಮೇಲೆ ಅವಲಂಬಿತವಾಗಿವೆ ರಾಯಚೂರು ಸರ್ಕಾರಿ ಆಸ್ಪತ್ರೆಗಳು

ಬಡಜನ ವಾಸಿಸುವ ಬಡಾವಣೆಗಳನ್ನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಅವರಿಗೆ ಸಕಾಲಕ್ಕೆ ವೈದ್ಯಕೀಯ ಸೇವೆ ಸಿಗಬೇಕು ಎನ್ನುವ ಉದ್ದೇಶವಿದೆ. ಆದ್ರೆ ಇರುವ ಐದು ಆಸ್ಪತ್ರೆಗಳಲ್ಲಿ ಕೆಲವೊಂದು ಸಲ ಸಮಯಕ್ಕೆ ಸರಿಯಾಗಿ ವೈದ್ಯರು ಸಿಗುವುದಿಲ್ಲ. ಬದಲಾಗಿ ಶುಶ್ರೂಷಕಿಯರ ಮೇಲೆ ಅವಲಂಬಿತವಾಗಿ ಆಸ್ಪತ್ರೆಗಳನ್ನ ನಡೆಸಲಾಗುತ್ತಿದೆ.

ಇನ್ನೂ ಪಿಎಚ್​ಸಿಗಳನ್ನ ಹೊರತು ಪಡಿಸಿ ಉಳಿದಂತೆ ರಿಮ್ಸ್​ಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗುತ್ತದೆ. ಒಂದು ವೇಳೆ ಇಲ್ಲಿಯುರುವ ಸೌಲಭ್ಯಕ್ಕಿಂತ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದರೆ, ಬಳ್ಳಾರಿ, ಬೆಂಗಳೂರು, ಇಲ್ಲವೇ ಹೈದರಾಬಾದ್ ಚಿಕಿತ್ಸೆಗೆ ಕಳುಹಿಸಲಾಗುತ್ತದೆ.

ಸದ್ಯ ನಗರದ ಸ್ಲಂ- ನಿವಾಸಿಗಳಿಗಾಗಿ ಬಡಾವಣೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಬಿಎಂಎಸ್ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಕೆಲವೊಂದು ಸಮಯದಲ್ಲಿ ಸಮರ್ಪಕವಾದ ಚಿಕಿತ್ಸೆ ದೊರೆಯದ ಆರೋಪಗಳು ಕೇಳಿ ಬಂದಿವೆ. ಇದರಿಂದ ಆರೋಗ್ಯ ಇಲಾಖೆ ಸ್ಲಂ ಪ್ರದೇಶದಲ್ಲಿ ಇನ್ನಷ್ಟು ಆಸ್ಪತ್ರೆಗಳನ್ನು ಮತ್ತು ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು ಎನ್ನುವ ಮಾತು ಕೇಳಿ ಬರುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.