ರಾಯಚೂರು: ಕಲ್ಯಾಣ - ಕರ್ನಾಟಕ(ಹೈದರಾಬಾದ್-ಕರ್ನಾಟಕ) ಭಾಗದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆರು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2021-2022ನೇ ಸಾಲಿನಲ್ಲಿ ಮಂಡಿಸುವ ಆಯ್ಯವ್ಯಯದ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿಟ್ಟುಕೊಂಡಿದ್ದು, 276.60 ಕೋಟಿ ರೂಪಾಯಿಗಾಗಿ ಪ್ರಸ್ತಾವನೆಯನ್ನ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ.
ಕೃಷಿ ಸಂಶೋಧನೆ ವ್ಯಾಪ್ತಿಯಲ್ಲಿ ದಿನಗೂಲಿ ನೌಕರರ, ಬೋಧಕ, ಬೋಧಕೇತರ ಸಿಬ್ಬಂದಿ, ರಜಾ ದಿನಗಳ ನಗದೀಕರಣ(ನಿವೃತ್ತಿ ಹೊಂದಿದವರಿಗೆ) ಸಿಬ್ಬಂದಿಗೆ, ಮತ್ತು ಎಲ್ಲಾ ಸಿಬ್ಬಂದಿಗಳಿಗೆ ಮತ್ತು ಟೈರ್ 1 ಸಿಬ್ಬಂದಿಗಳು ಹೊಂದಾಣಿಕೆ ಕೊಡುಗೆ ವೇತನಕ್ಕಾಗಿ 63.66 ಕೋಟಿ, ಮುಂದುವರಿದ ಯೋಜನೆಗಳು ಮತ್ತು ಹೊಸ ಯೋಜನೆಗಳಿಗಾಗಿ ಒಟ್ಟು ಸಹಾಯದನಕ್ಕಾಗಿ 62.38 ಕೋಟಿ ರೂಪಾಯಿ, ಗುತ್ತಿಗೆ, ಹೊರಗುತ್ತಿಗೆ, ವಿಶ್ರಾಂತಿ ವೇತನ, ಪರಿಶಿಷ್ಟ ಜಾತಿ ಶಿಕ್ಷಕರ ಸಂಶೋಧನೆಗಾಗಿ, ಗಿರಿಜನ ಶಿಕ್ಷಕರು/ವಿಜ್ಞಾನಿಗಳ ಸಂಶೋಧನೆಗಾಗಿ 170 ಕೋಟಿ ಪ್ರಸ್ತಾವನೆಯನ್ನ ಸಲ್ಲಿಸಲಾಗಿದೆ.
ಕೃಷಿ ಶಿಕ್ಷಣ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ಬೋಧಕ, ಬೋಧಕೇತರ ಸಿಬ್ಬಂದಿ ವೇತನ ಮತ್ತು ಮುಂದುವರಿದ ಯೋಜನೆಗಳು, ಹೊಸ ಯೋಜನೆಗಳಿಗಾಗಿ 94.66 ಕೋಟಿ ರೂಪಾಯಿ ಪ್ರಸ್ತಾವನೆ ಕಳುಹಿಸಲಾಗಿದೆ. ಜತೆಗೆ ಪರಿಶಿಷ್ಟ ಜಾತಿ ಉಪಯೋಜನೆ, ಗಿರಿಜನ ಉಪಯೋಜನೆ ಸೇರಿದಂತೆ ವಿವಿಯಿಂದ 276.60 ಕೋಟಿ ರೂಪಾಯಿಯನ್ನ ಅನುದಾನ ಪ್ರಸ್ತಾವನೆಯನ್ನ ಕೃಷಿ ವಿವಿಯಿಂದ ರವಾನಿಸಲಾಗಿದೆ.
ಆದರೆ ಸಿಎಂ ಮಂಡಿಸುವ ಬಜೆಟ್ನಲ್ಲಿ ನಿರೀಕ್ಷೆಯಂತೆ ಫಲ ನೀಡುತ್ತಾರಾ ಎನ್ನುವುದು ಕಾದು ನೋಡಬೇಕಾಗಿದೆ.