ETV Bharat / state

ಹಾರುಬೂದಿ ಸಗಾಣಿಕೆ ವಾಹನಗಳು ಸುರಕ್ಷತಾ ಕ್ರಮ ಪಾಲಿಸಬೇಕು : ಎಸ್ಪಿ

author img

By

Published : Aug 29, 2020, 10:12 PM IST

ರಸ್ತೆಯ ಪಕ್ಕದಲ್ಲಿ ಹಾರು ಬೂದಿ ವಾಹನಗಳ ನಿಲುಗಡೆಗೆ ಆರ್‌ಟಿಪಿಎಸ್ ಅಧಿಕಾರಿಗಳು ಸ್ಥಳ ಗುರುತಿಸಬೇಕು. ಹಾರುಬೂದಿ ಸಗಾಣಿಕೆ ಸುರಕ್ಷತಾ ಕ್ರಮಗಳನ್ನು ಪಾಲಿಸದ ಏಜೆನ್ಸಿಗಳ ಗುತ್ತಿಗೆ ರದ್ದು ಪಡಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದ ವಾಹನ ಚಾಲಕರು ಹಾಗೂ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳವ ಕುರಿತು ಸೂಚಿಸಲಾಯಿತು..

SP Meeting
SP Meeting

ರಾಯಚೂರು : ಹಾರುಬೂದಿ ಲಾರಿಗಳು ನಿಗದಿ ಪಡಿಸಿದ ಪ್ರಮಾಣದಲ್ಲಿ ಮಾತ್ರ ಸಾಗಾಣಿಕೆ ಮಾಡಬೇಕು. ಸಾಗಿಸುವ‌ ಸಮಯದಲ್ಲಿ ಬೇರೆ ವಾಹನಗಳಿಗೆ ಅಡ್ಡಿಯಾಗದ ರೀತಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠ ಪ್ರಕಾಶ್ ನಿಕ್ಕಂ ಸೂಚಿಸಿದರು.

ಶಕ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಶಕ್ತಿನಗರ ಆರ್‌ಟಿಪಿಎಸ್ ಕೇಂದ್ರದಿಂದ ಹಾರುಬೂದಿ ಲಾರಿಗಳು ಮತ್ತು ಟಿಪ್ಪರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಬೂದಿ ತುಂಬಿಕೊಂಡು ಹೋಗುತ್ತಿವೆ. ಇದರಿಂದ ರಸ್ತೆಯ ಪಕ್ಕದಲ್ಲಿ ವಾಹನ ನಿಲುಗಡಯಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಆಗುತ್ತಿರುವ ತೊಂದರೆ ಕುರಿತು ಸಾರ್ವಜನಿಕರಿಂದ ದೂರು ಬಂದಿದ್ದವು. ಈ ಹಿನ್ನೆಲೆ ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಹಾರು ಬೂದಿ ಸಾಗಾಟಗಾರರ ಜೊತೆ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಬೂದಿ ವಾಹನಗಳು ಸಂಚರಿಸುವ ಸಮಯದಲ್ಲಿ ಟಾರ್ಪಲ್ ಹಾಕಿಕೊಂಡು ಸಂಚರಿಸಬೇಕು. ಬೂದಿ ಗಾಳಿಗೆ ಹಾರದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಹಾರುಬೂದಿ ಘಟಕದೊಳಗೆ ಬರುವ ಹಾಗೂ ಹೋಗುವ ರಸ್ತೆಯಲ್ಲಿ ಸಿಸಿಟಿವಿಗಳನ್ನು ಅಳವಡಿಸಕೊಳ್ಳಲು ಆರ್‌ಟಿಪಿಎಸ್‌ ಅಧಿಕಾರಿಗಳಿಗೆ ಸೂಚಿಸಿದರು.

ರಸ್ತೆಯ ಪಕ್ಕದಲ್ಲಿ ಹಾರು ಬೂದಿ ವಾಹನಗಳ ನಿಲುಗಡೆಗೆ ಆರ್‌ಟಿಪಿಎಸ್ ಅಧಿಕಾರಿಗಳು ಸ್ಥಳ ಗುರುತಿಸಬೇಕು. ಹಾರುಬೂದಿ ಸಗಾಣಿಕೆ ಸುರಕ್ಷತಾ ಕ್ರಮಗಳನ್ನು ಪಾಲಿಸದ ಏಜೆನ್ಸಿಗಳ ಗುತ್ತಿಗೆ ರದ್ದು ಪಡಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದ ವಾಹನ ಚಾಲಕರು ಹಾಗೂ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳವ ಕುರಿತು ಸೂಚಿಸಲಾಯಿತು. ಈ ಸಭೆಯಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಅಂಬಾರಾಯ ಕಮಾನಮನಿ, ಪಿಎಸ್ಐ ಓಂಕಾರ್ ಸೇರಿ ಐವತ್ತಕ್ಕೂ ಹೆಚ್ಚು ವಿವಿಧ ಏಜೆನ್ಸಿಗಳ ಮುಖಂಡರು ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.