ರಾಯಚೂರು: ಕೊರೊನಾ ಶಂಕೆ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಿಂದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ ರಕ್ತ ಹಾಗೂ ಗಂಟಲು ದ್ರವದ ಮಾದರಿಗಳಲ್ಲಿ 17 ಜನರ ವರದಿಗಳು ಇಂದು ನೆಗೆಟಿವ್ ಬಂದಿವೆ.
ಜಿಲ್ಲೆಯಿಂದ ಇದುವರೆಗೂ ಒಟ್ಟು 65 ಜನರ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಇದರಲ್ಲಿ ಒಟ್ಟು 44 ಜನರ ವರದಿ ನೆಗೆಟಿವ್ ಎಂದು ಬಂದಂತಾಗಿದ್ದು, ಇನ್ನೂ 4 ಜನರ ಪರೀಕ್ಷಾ ವರದಿ ಬರುವುದು ಮಾತ್ರ ಬಾಕಿ ಉಳಿದಿದೆ.
ಸರ್ಕಾರಿ ಕಟ್ಟಡದಲ್ಲಿ ದಿಗ್ಬಂಧನದಲ್ಲಿರುವವ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, ಶನಿವಾರ 14 ಜನರನ್ನು ಹೊಸದಾಗಿ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಈ ಮೂಲಕ ಸರ್ಕಾರಿ ದಿಗ್ಬಂಧನದಲ್ಲಿರುವವರ ಸಂಖ್ಯೆ 89ಕ್ಕೆ ಏರಿದೆ.