ರಾಯಚೂರು: ಬಿಸಿಲೂರು ರಾಯಚೂರು ಜಿಲ್ಲಾದ್ಯಂತ ಭಾರೀ ಮಳೆ ಹಿನ್ನೆಲೆ ಹಳ್ಳ - ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ಲಿಂಗಸೂಗೂರು ತಾಲೂಕಿನ ಹಟ್ಟಿ ಗ್ರಾಮದ ಯುವಕನೊಬ್ಬ ಹುಚ್ಚಾಟ ಆಡುತ್ತಾ ಸಂಕಷ್ಟಕ್ಕೆ ಸಿಲುಕಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಗ್ರಾಮಸ್ಥರಿಂದ ಯುವಕನ ರಕ್ಷಣೆ: ಸಂಗಿತಂ ಎಂಬ ಯುವಕ ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ಆಟವಾಡುತ್ತಿದ್ದನು. ಈ ವೇಳೆ, ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದನು. ಆಗ ಯುವಕ ಮರದ ಆಸರೆ ಪಡೆದು, ಸಹಾಯಕ್ಕಾಗಿ ಜೋರಾಗಿ ಕಿರುಚಿದ್ದಾನೆ. ಯುವಕನ ಕೂಗಾಟ ಕೇಳಿದ ಗ್ರಾಮಸ್ಥರು ಸಹಾಯಕ್ಕೆ ದೌಡಾಯಿಸಿದರು. ಹರಿಯುತ್ತಿರುವ ನೀರಿನಲ್ಲಿ ಹಗ್ಗದ ಸಹಾಯದಿಂದ ಗ್ರಾಮಸ್ಥರು ಯುವಕನನ್ನು ರಕ್ಷಣೆ ಮಾಡಿದರು.
ಈ ಘಟನೆ ಬಳಿಕ ಯುವಕನಿಗೆ ಬೈದು ಬುದ್ದಿ ಹೇಳಿದ ಪೋಷಕರು ರಕ್ಷಣೆ ಮಾಡಿದವರಿಗೆ ಕೃತ್ಞನ ಸಲ್ಲಿಸಿದರು. ಕೆಲವು ಕಡೆ ಮಳೆಯಿಂದಾಗಿ ಗದ್ದೆಗಳಿಗೆ ನೀರು ಹರಿದು ರೈತರ ಬೆಳೆ ನಷ್ಟವಾಗಿದೆ. ಇದರಿಂದಾಗಿ ರೈತರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮಳೆಯಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಓದಿ: ಕಲಬುರಗಿಯಲ್ಲಿ ಭಾರೀ ಮಳೆ : 200 ಮಕ್ಕಳು ಶಾಲಾ ಸಿಬ್ಬಂದಿ ರಕ್ಷಿಸಿದ ಗ್ರಾಮಸ್ಥರು