ETV Bharat / state

ಸೌದಿಯಿಂದ ಬಂದ ಕೊರೊನಾ ಶಂಕಿತನ ಓಡಾಟ.. ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ - ಕೊರೊನಾ ಭಯ

ಕೆಲದ ದಿನಗಳ ಹಿಂದೆ ಈತ ಕಲಬುರ್ಗಿ, ಶಹಾಪುರಕಕ್ಕೂ ಕೂಡ ಹೋಗಿ ಬಂದಿದ್ದಾನೆ. ಇದನ್ನು ಕಂಡ ಬಡಾವಣೆ ಜನ ಸಾಕಷ್ಟು ಭಯಗೊಂಡಿದ್ರು.

raichur-people-panic-about-corona-virus
ಕೊರೊನಾ ಶಂಕಿತ ವ್ಯಕ್ತಿ ಓಡಾಟ
author img

By

Published : Mar 22, 2020, 3:33 PM IST

Updated : Mar 22, 2020, 3:38 PM IST

ರಾಯಚೂರು : ಸೌದಿಯಿಂದ ಬಂದ ಕೊರೊನಾ ಶಂಕಿತ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಜನರ ಮಧ್ಯೆಯೇ ಓಡಾಡಿರುವ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ.

ಕೊರೊನಾ ಶಂಕಿತ ವ್ಯಕ್ತಿ ಓಡಾಟ.. ಜನರಲ್ಲಿ ಹೆಚ್ಚಿದ ಆತಂಕ

ಶಕ್ತಿನಗರದ ರಾಘವೇಂದ್ರ ಬಡಾವಣೆಯಲ್ಲಿ ಈ ವ್ಯಕ್ತಿ ಓಡಾಟ ನಡೆಸುತ್ತಿದ್ದ. ಸೌದಿಯಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದು, ನಂತರ ಅಲ್ಲಿಂದ ರಾಯಚೂರಿನ ಶಕ್ತಿನಗರಕ್ಕೆ ಆಗಮಿಸಿದ್ದ. ಈ ವೇಳೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಲಾಗಿತ್ತು. ಆದರೆ, ಸೌದಿಯಿಂದ ವ್ಯಕ್ತಿ ನೇರವಾಗಿ ಮನೆಗೆ ಹೋಗಬೇಕು. ಹೊರಗಡೆ ಓಡಾಡಬಾರದೆಂದು ಸೂಚಿಸಲಾಗಿತ್ತು. ಆದ್ರೂ ಈ ವ್ಯಕ್ತಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾನೆ.

ಅಲ್ಲದೆ ಕೆಲದ ದಿನಗಳ ಹಿಂದೆ ಈತ ಕಲಬುರ್ಗಿ, ಶಹಾಪುರಕಕ್ಕೂ ಕೂಡ ಹೋಗಿ ಬಂದಿದ್ದಾನೆ. ಇದನ್ನು ಕಂಡ ಬಡಾವಣೆ ಜನ ಸಾಕಷ್ಟು ಭಯಗೊಂಡಿದ್ರು. ಆಗ ತಹಶೀಲ್ದಾರ್ ಹಂಪಣ್ಣ ಸಜ್ಜನ್‌ಗೆ ಮಾಹಿತಿ ನೀಡಲಾಯಿತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ವ್ಯಕ್ತಿಯನ್ನ ವಿಚಾರಿಸಿದರು. ಆಗ ಮಾತಿನ ಚಕಮಕಿ ನಡೆಯಿತು. ಆದರೆ, ಬಳಿಕ ವ್ಯಕ್ತಿಯ ಮನವೊಲಿಸಿ ಆ್ಯಂಬುಲೆನ್ಸ್​​ನಲ್ಲಿ ಸ್ಥಳಾಂತರ ಮಾಡಲಾಯ್ತು.

Last Updated : Mar 22, 2020, 3:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.