ETV Bharat / state

ಕುಡಿಯುವ ನೀರಿನ ಕೆರೆ ದುರ್ನಾತ ಬೀರಿದರೂ ತಲೆ ಕೆಡಿಸಿಕೊಳ್ಳದ ಪುರಸಭೆ

ರಾಯಚೂರು ಜಿಲ್ಲೆಯ ಕಾಳಾಪುರ ಬಳಿಯ ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಬಳಿ ನಿರ್ಮಿಸಿದ 5 ಎಕರೆ ವಿಶಾಲವಾದ ಕೆರೆಯೊಂದು ಸೂಕ್ತ ನಿರ್ವಹಣೆಯಿಲ್ಲದೆ ಮುಳ್ಳು ಕಂಟಿ, ಆಪು ಇತರೆ ಸಸ್ಯ, ಗಿಡಗಳು ಬೆಳೆದು ಕಸಕಡ್ಡಿ ಸೇರಿ ದುರ್ನಾತ ಬೀರುವಂತಾಗಿದೆ.

Raichur municipality is least bothered regarding lake
ಕುಡಿಯುವ ನೀರಿನ ಕೆರೆ ದುರ್ನಾತ ಬೀರಿದರೂ ತಲೆಕೆಡಿಸಿಕೊಳ್ಳದ ಪುರಸಭೆ
author img

By

Published : May 27, 2020, 10:26 AM IST

ರಾಯಚೂರು: ಜಿಲ್ಲೆಯ ಲಿಂಗಸೂಗುರು ಪುರಸಭೆ ವ್ಯಾಪ್ತಿ ಜನತೆಗೆ ಶುದ್ಧ, ಸಮರ್ಪಕ ಕುಡಿವ ನೀರು ಪೂರೈಸಲು ನಿರ್ಮಾಣಗೊಂಡ ಕೆರೆ ಅಂಗಳದಲ್ಲಿ ಮುಳ್ಳು ಕಂಟಿ, ಆಪು, ಹುಲ್ಲು ಬೆಳೆದು ನೀರಿನ ನೈರ್ಮಲ್ಯ ಹಾಳಾಗುತ್ತಿದೆ.

ಕಾಳಾಪುರ ಬಳಿಯ ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಬಳಿ ನಿರ್ಮಿಸಿರುವ 5 ಎಕರೆ ವಿಶಾಲವಾದ ಕೆರೆಯೊಂದು ಸೂಕ್ತ ನಿರ್ವಹಣೆಯಿಲ್ಲದೆ ಮುಳ್ಳು ಕಂಟಿ, ಆಪು ಇತರೆ ಸಸ್ಯ, ಗಿಡಗಳು ಬೆಳೆದು ಕಸಕಡ್ಡಿ ಸೇರಿ ದುರ್ನಾತ ಬೀರುವಂತಾಗಿದೆ. ಕೆರೆ ಒಡ್ಡಿನ ಮೇಲೆ ನಾಲ್ಕು ದಿಕ್ಕುಗಳಲ್ಲಿ ವಾಹನ ಸಂಚಾರ ಮಾಡುವಷ್ಟು ವಿಶಾಲ ರಸ್ತೆ ನಿರ್ಮಿಸಲಾಗಿತ್ತು. ಆದರೆ ಈಗ ಮುಳ್ಳು ಕಂಟಿ, ಗಿಡಮರ ಬೆಳೆದು ರಸ್ತೆಗಳು ಮುಚ್ಚಿ ಹೋಗಿವೆ. ಅಲ್ಲಲ್ಲಿ ಗಿಡಗಳ ಬೇರುಗಳಿಂದ ಮಣ್ಣಿನ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿದೆ. ವಿದ್ಯುತ್ ಪರಿವರ್ತಕಗಳ ಕೆಳಭಾಗ ನೀರಿನಿಂದ ಜಲಾವೃತಗೊಂಡಿದ್ದರೂ ಕೂಡ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂಬ ಆರೋಪವಿದೆ.

ಕುಡಿವ ನೀರು ಪೂರೈಸುವ ಕೆರೆ ಅಂಗಳ, ಅದರ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆ ಕಾಪಾಡಿಕೊಳ್ಳದೆ ಹೋಗಿದ್ದರಿಂದ ದುರ್ನಾತ ಬೀರುತ್ತಿದೆ. ಅದೇ ನೀರನ್ನು ಶುದ್ಧೀಕರಿಸದೆ ಪೂರೈಸುತ್ತಿರುವುದರಿಂದ ಬಹುತೇಕರು ರೋಗ ರುಜಿನಗಳಿಂದ ಬಳಲುವಂತಾಗಿದೆ ಎಂದು ಸಮಾಜ ಸೇವಕ ಜಾಫರಹುಸೇನ ಫೂಲವಾಲೆ ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.