ರಾಯಚೂರು: ಸಾಲ ನೀಡಿದವರಿಗೆ ಮರಳಿ ಹಣ ನೀಡುವುದಾಗಿ ಏ.15ರಂದು ಮನೆಯಿಂದ ತೆರಳಿದ್ದ ನಗರದ ಆಶ್ರಯ ಕಾಲೋನಿಯ ನಿವಾಸಿ ಮಾರೆಪ್ಪ (35) ಎಂಬಾತ ಮನೆಗೆ ಮರಳಿ ಬಾರದೇ ಕಾಣೆಯಾಗಿದ್ದಾರೆ.
ಹಣ ನೀಡಲು ತಾಲೂಕಿನ ಎಮ್ಮಿಗನೂರು ಗ್ರಾಮಕ್ಕೆ ಹೋಗಿ ಬರುವುದಾಗಿ ಪತ್ನಿ ಮಲ್ಲಮ್ಮಳಿಗೆ ಹೇಳಿ ಹೋದ ಮಾರೆಪ್ಪ ಇದುವರೆಗೂ ಮರಳಿ ಬಂದಿಲ್ಲ. ಈ ಬಗ್ಗೆ ಸಂಬಂಧಿಕರ ಬಳಿ ವಿಚಾರಿಸಿದರೂ ಪ್ರಯೋಜನವಾಗಿಲ್ಲ.
ಈ ಕುರಿತು ಪತ್ನಿ ಮಲ್ಲಮ್ಮ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.