ETV Bharat / state

ರಾಯಚೂರು ಲಾಕ್​ಡೌನ್​: ಅನಗತ್ಯ ಓಡಾಟಕ್ಕೆ ಬ್ರೇಕ್​​

ರಾಯಚೂರು, ಸಿಂಧನೂರು ನಗರವನ್ನ ಲಾಕ್‌ಡೌನ್ ಮಾಡಲಾಗಿದ್ದು, ಅನವಶ್ಯಕವಾಗಿ ಓಡಾಡುವ ಜನರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಪಡಿಸಲಾಗಿದೆ.

author img

By

Published : Jul 15, 2020, 1:13 PM IST

ರಾಯಚೂರು ಲಾಕ್​ಡೌನ್​ ಕುರಿತು ವಾಕ್​ ಥ್ರೂ
ರಾಯಚೂರು ಲಾಕ್​ಡೌನ್​ ಕುರಿತು ವಾಕ್​ ಥ್ರೂ

ರಾಯಚೂರು: ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ರಾಯಚೂರು, ಸಿಂಧನೂರು ನಗರವನ್ನ ಲಾಕ್‌ಡೌನ್ ಮಾಡಲಾಗಿದೆ.

ಈ ಎರಡು ನಗರ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅನುವು ಮಾಡಿಕೊಡಲಾಗಿದ್ದು, ವೈದ್ಯಕೀಯ ತುರ್ತು ಸೇವೆಗಳಿಗೆ ಅವಕಾಶವಿದೆ.

ರಾಯಚೂರು ಲಾಕ್​ಡೌನ್​ ಕುರಿತು ವಾಕ್​ ಥ್ರೂ

ಲಾಕ್‌ಡೌನ್ ಜಾರಿಯಲ್ಲಿರುವ ರಾಯಚೂರು, ಸಿಂಧನೂರು ನಗರಗಳಲ್ಲಿ ಅಗತ್ಯ ವಸ್ತುಗಳ ಮಾರುಕಟ್ಟೆಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2ರವರಗೆ ಅವಕಾಶ ನೀಡಲಾಗಿದೆ. ಅನವಶ್ಯಕವಾಗಿ ಓಡಾಟ ನಡೆಸಿದವರನ್ನ ಪೊಲೀಸರು ತರಾಟೆಗೆ ತೆಗೆದುಕೊಂಡು ವಾಪಸ್ ಕಳುಹಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸೋಂಕಿತರ ಸಂಖ್ಯೆ 788ಕ್ಕೆ ತಲುಪಿದೆ. ಇದರಲ್ಲಿ 472 ಜನ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ 302 ಪ್ರಕರಣಗಳು ಸಕ್ರಿಯವಾಗಿದ್ದು, 10 ಜನ ಸೋಂಕಿತರು ಮೃತಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.