ETV Bharat / state

ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆ ಶ್ರೇಯಾಂಕದಲ್ಲಿ ರಾಯಚೂರಿಗೆ ಪ್ರಥಮ ರ‍್ಯಾಂಕ್

ಆರೋಗ್ಯ, ಶಿಕ್ಷಣ, ಆರ್ಥಿಕ ಸಬಲೀಕರಣ, ಕೃಷಿ, ಮೂಲಸೌಕರ್ಯ ಸೇರಿದಂತೆ ವಿವಿಧ ಮಾನದಂಡಗಳ ಆಧಾರದಲ್ಲಿ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆ ಶ್ರೇಯಾಂಕದಲ್ಲಿ ರಾಯಚೂರು ಪ್ರಥಮ ರ‍್ಯಾಂಕ್ ಪಡೆದುಕೊಂಡಿದೆ.

Raichur
ಜಿಲ್ಲಾಧಿಕಾರಿ ಎಲ್ ಚಂದ್ರಶೇಖರ ನಾಯಕ
author img

By

Published : Aug 13, 2023, 2:24 PM IST

Updated : Aug 13, 2023, 2:31 PM IST

ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎಲ್ ಚಂದ್ರಶೇಖರ ನಾಯಕ

ರಾಯಚೂರು : ಅಖಿಲ ಭಾರತ ಮಹತ್ವಾಕಾಂಕ್ಷೆಯ ಜಿಲ್ಲಾ ಡೆಲ್ಟಾ ಶ್ರೇಯಾಂಕ ಪ್ರಕಟವಾಗಿದೆ. ಇದರಲ್ಲಿ ರಾಯಚೂರು ಜಿಲ್ಲೆಯು ಆರೋಗ್ಯ, ಪೌಷ್ಟಿಕಾಂಶ, ಶಿಕ್ಷಣ, ಕೃಷಿ ಮತ್ತು ನೀರಾವರಿ ಸಂಪನ್ಮೂಲಗಳು, ಆರ್ಥಿಕ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳ ಅಂಶಗಳಲ್ಲಿ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ನೀತಿ ಆಯೋಗದಿಂದ ದೇಶದಲ್ಲಿಯೇ ಮೊದಲ ರ‍್ಯಾಂಕ್ ಪಡೆದುಕೊಂಡಿದೆ ಎಂದು ಜಿಲ್ಲಾಧಿಕಾರಿ ಎಲ್ ಚಂದ್ರಶೇಖರ ನಾಯಕ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, " 2023 ರ ಜೂನ್ ತಿಂಗಳಿನಲ್ಲಿ ನೀತಿ ಆಯೋಗದಿಂದ ಅಖಿಲ ಭಾರತ ಮಹತ್ವಾಕಾಂಕ್ಷೆಯ ಜಿಲ್ಲಾ ಡೆಲ್ಟಾ ಶ್ರೇಯಾಂಕವನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ರಾಯಚೂರು ಜಿಲ್ಲೆಯೂ ಐದು ವಲಯಗಳಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದೆ. ಜೊತೆಗೆ ಸಮಗ್ರ ಅಭಿವೃದ್ಧಿಯಲ್ಲಿ ಮೊದಲನೇ ರ‍್ಯಾಂಕ್ ಪಡೆದುಕೊಂಡಿದೆ " ಎಂದರು.

ಇದನ್ನೂ ಓದಿ : NEET Result 2023 : ರಾಯಚೂರಿನ ಖಾಸಗಿ ಕಾಲೇಜಿನ ಒಡಿಶಾ ವಿದ್ಯಾರ್ಥಿ ರಾಜ್ಯಕ್ಕೆ 127ನೇ ರ‍್ಯಾಂಕ್​, ಸಿಇಟಿಯಲ್ಲೂ ಉತ್ತಮ ಸಾಧನೆ

"ದೇಶಾದ್ಯಂತ ಒಟ್ಟು 112 ಮಹತ್ವಾಕಾಂಕ್ಷೆ ಜಿಲ್ಲೆಗಳಿದ್ದು, ಈ ಜಿಲ್ಲೆಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶ, ಕೃಷಿ ಮತ್ತು ನೀರಾವರಿ ಸಂಪನ್ಮೂಲ, ಅರ್ಥಿಕ ಅಭಿವೃದ್ಧಿ ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳಲ್ಲಿ ಪ್ರಗತಿ ಸಾಧಿಸಲು ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ರಾಯಚೂರು ಜಿಲ್ಲೆಯೂ ಸಹ ಮಹತ್ವಾಕಾಂಕ್ಷೆ ಜಿಲ್ಲೆಯಾಗಿದ್ದು, ಇಡೀ ದೇಶದಲ್ಲಿ 2023ರ ಜೂನ್ ತಿಂಗಳ ಶ್ರೇಯಾಂಕದಲ್ಲಿ ಮೊದಲನೇ ರ‍್ಯಾಂಕ್ ಸಾಧಿಸಿದೆ ಮತ್ತು ಬಹುಮಾನವಾಗಿ ಜಿಲ್ಲೆಗೆ 10 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ " ಎಂದು ಹೇಳಿದರು.

ಇದನ್ನೂ ಓದಿ : ಇನ್ನೋವೇಷನ್​ ವಿಭಾಗದಲ್ಲಿ ರಾಜ್ಯ ಫಸ್ಟ್ ​: ಎಫ್​ಕೆಸಿಸಿಐ ಹರ್ಷ

ಬಿಡುಗಡೆಯಾದ ಅನುದಾನವನ್ನು ಮಹತ್ವಾಕಾಂಕ್ಷೆ ಜಿಲ್ಲೆಯ ಅಭಿವೃದ್ಧಿಗಾಗಿ ಸಂಬಂಧಪಟ್ಟ ಆಯಾ ಇಲಾಖೆಯ ಆದ್ಯತೆ ಮೇರೆಗೆ ಕ್ರಿಯಾ ಯೋಜನೆ ರೂಪಿಸಿ ಕೇಂದ್ರಕ್ಕೆ ರವಾನಿಸಲಾಗುವುದು. ಕೇಂದ್ರದಿಂದ ಯೋಜನೆಗೆ ಅನುಮೋದನೆ ದೊರೆತ ನಂತರ ಅನುದಾನ ಬಿಡುಗಡೆಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದನ್ನೂ ಓದಿ : ನೀತಿ ಆಯೋಗದ ಇನ್ನೋವೇಷನ್ ಸೂಚ್ಯಂಕ : ದೇಶದಲ್ಲಿ ಕರ್ನಾಟಕದ ಸ್ಥಾನವೆಷ್ಟು ಗೊತ್ತಾ?

ಇನ್ನು "ರಾಯಚೂರು ಜಿಲ್ಲೆಗೆ ಇಡೀ ದೇಶದಲ್ಲಿ ಮಹತ್ವಾಕಾಂಕ್ಷೆ ಜಿಲ್ಲೆಯ ಶ್ರೇಯಾಂಕದಲ್ಲಿ ಪ್ರಥಮ ರ‍್ಯಾಂಕ್ ಸಿಕ್ಕಿರುವುದರ ಹಿಂದೆ ಆಯಾ ಇಲಾಖೆಯ ಅಧಿಕಾರಿಗಳ ಶ್ರಮವಿದೆ. ಸಮಗ್ರ ಅಭಿವೃದ್ಧಿಯಲ್ಲಿ 2021ರ ಮಾರ್ಚ್ ತಿಂಗಳಿನಲ್ಲಿ ಜಿಲ್ಲೆಯೂ 111 ನೇ ರ‍್ಯಾಂಕ್‌ನಲ್ಲಿತ್ತು. ಇದೀಗ 2023 ರ ಸಮಗ್ರ ಅಭಿವೃದ್ಧಿಯಲ್ಲಿ ಮೊದಲನೇ ರ‍್ಯಾಂಕ್ ಪಡೆದಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಇನ್ನೂ ಹೆಚ್ಚಿನ ಶ್ರಮ ವಹಿಸಿ ಇಲಾಖೆಯಲ್ಲಿರುವ ಕಾಮಗಾರಿಗಳು ಮತ್ತು ಯೋಜನೆಗಳ ಅನುಷ್ಠಾನದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕಾಗಿದೆ" ಎಂದರು.

ಇದನ್ನೂ ಓದಿ : ಕೇಂದ್ರ ನೀತಿ ಆಯೋಗ ಮಾದರಿಯಲ್ಲಿ ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ ರಚನೆಗೆ ಆದೇಶ

Last Updated : Aug 13, 2023, 2:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.