ETV Bharat / state

ಲಿಂಗಸುಗೂರಿನಲ್ಲಿ ನಡು ರಸ್ತೆಯಲ್ಲಿ ಸಸಿ ನೆಡುತ್ತಿರುವುದಕ್ಕೆ ಆಕ್ಷೇಪ.. - ರಾಯಚೂರು ಜಿಲ್ಲಾ ಅರಣ್ಯ ಇಲಾಖೆ

ಪ್ರತಿಷ್ಠಿತರ ಮನೆ, ಅಂಗಡಿಗಳ ಮುಂದೆ ಸಸಿ ನಾಟಿ ಮಾಡುತ್ತಿಲ್ಲ. ರಸ್ತೆ ಅಳತೆ ಆಧರಿಸಿ ನಾಟಿ ಮಾಡದ ಬಗ್ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಪ್ರಭುಲಿಂಗ ಆಕ್ಷೇಪ ವ್ಯಕ್ತಪಡಿಸಿದರು. ಸರಿಪಡಿಸದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

fsdf
ಲಿಂಗಸುಗೂರಿನಲ್ಲಿ ನಡು ರಸ್ತೆಯಲ್ಲಿ ಸಸಿ ನೆಡುತ್ತಿರುವ ಆರೋಪ
author img

By

Published : Jun 16, 2020, 9:06 PM IST

ರಾಯಚೂರು : ಜಿಲ್ಲೆ ಲಿಂಗಸುಗೂರು ಪಟ್ಟಣದಲ್ಲಿ ಬಹುತೇಕ ಪ್ರಮುಖ ರಸ್ತೆಯಲ್ಲಿ ಸಸಿ ನೆಡುತ್ತಿರುವ ಅರಣ್ಯ ಇಲಾಖೆ ಕಾರ್ಯ ವೈಖರಿಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಲಿಂಗಸೂಗೂರಿನಲ್ಲಿ ನಡು ರಸ್ತೆಯಲ್ಲಿ ಸಸಿ ನೆಡುತ್ತಿರುವ ಆರೋಪ

ಮಳೆಗಾಲ ಆರಂಭದಲ್ಲಿ ಹಲವು ವರ್ಷಗಳಿಂದ ಅರಣ್ಯ ಇಲಾಖೆ ಸಸಿ ನೆಡುತ್ತಿದೆ. ರಸ್ತೆ ಬದಿ ಸಸಿ ನೆಡುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂದು ಜನ ಆರೋಪಿಸಿದ್ದಾರೆ. ಪಟ್ಟಣದಲ್ಲಿ 300ಕ್ಕೂ ಹೆಚ್ಚು ಹೊಸ ಬಡಾವಣೆಗಳಿವೆ. ಅಲ್ಲಿನ ಉದ್ಯಾನಗಳು ಒಂದು ಸಸಿ ಕಾಣದೆ ಬಣಗುಟ್ಟುತ್ತಿವೆ. ರಸ್ತೆ ಅಗಲೀಕರಣದ ಹೆಸರಲ್ಲಿ ಮರಗಳ ಮಾರಣ ಹೋಮ ನಡೆಯುತ್ತಿವೆ. ಇನ್ನೊಂದೆಡೆ ರಸ್ತೆ ಮಧ್ಯೆ ಅರಣ್ಯೀಕರಣ ನಡೆಸುತ್ತಿರುವ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದಿವೆ.

ಲಿಂಗಸುಗೂರು ಬೈಪಾಸ್ ರಸ್ತೆ ವಿಸ್ತರಣೆ ಹಂತದಲ್ಲಿದೆ. ಪ್ರತಿಷ್ಠಿತರ ಮನೆ, ಅಂಗಡಿಗಳ ಮುಂದೆ ಸಸಿ ನಾಟಿ ಮಾಡುತ್ತಿಲ್ಲ. ರಸ್ತೆ ಅಳತೆ ಆಧರಿಸಿ ನಾಟಿ ಮಾಡದ ಬಗ್ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಪ್ರಭುಲಿಂಗ ಆಕ್ಷೇಪ ವ್ಯಕ್ತಪಡಿಸಿದರು. ಸರಿಪಡಿಸದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.