ರಾಯಚೂರು : ಪ್ರಸಕ್ತ ಮುಂಗಾರಿನಲ್ಲಿ ತುಂಗಭದ್ರಾ ಎಡದಂಡೆ ನಾಲೆಯಿಂದ ನೀರು ಬಿಡುವ ಕುರಿತು ಹಾಗೂ ರೈತರಿಗೆ ಸುಗಮವಾಗಿ ನೀರು ಪೂರೈಸುವ ಉದ್ದೇಶದಿಂದ ಕೊಪ್ಪಳ, ರಾಯಚೂರು ಜಿಲ್ಲೆಗಳ ಅಧಿಕಾರಿಗಳು ಸಭೆ ನಡೆಸಿದರು.
ಜಿಲ್ಲೆಯ ಸಿಂಧನೂರು ಪಟ್ಟಣದ ಹೊರವಲಯದ ನ್ಯೂ ಕಮ್ಮವಾರಿ ಕಲ್ಯಾಣಮಂಟಪದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ತುಂಗಭದ್ರಾ ಎಡದಂಡೆಗೆ ನಿಗದಿಯಂತೆ ನೀರು ಹರಿ ಬಿಡಲಾಗುತ್ತಿದೆ. ಆದರೆ, ನಾಲೆಯಿಂದ ಅಕ್ರಮವಾಗಿ ನೀರು ಕಬಳಿಸಿ, ನೀರಾವರಿ ಮಾಡಲಾಗುತ್ತಿರುವ ಆರೋಪವಿದೆ. ಹೀಗಾಗಿ ಕೆಳ ಭಾಗದ ರೈತರಿಗೆ ನೀರು ತಲುಪದೆ, ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ರೈತರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಿ, ಅಕ್ರಮ ನೀರಾವರಿ ತಡೆಯುವ ನಿಟ್ಟಿನಲ್ಲಿ ಕೊಪ್ಪಳ ಹಾಗೂ ರಾಯಚೂರು ಜಿಲ್ಲಾಧಿಕಾರಿಗಳು, ಕ್ರಮಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.