ETV Bharat / state

ಲಸಿಕಾ ಅಭಿಯಾನ: ಮಾಹಿತಿ ನೀಡದ 16 ಕಾಲೇಜುಗಳಿಗೆ ನೋಟಿಸ್​ - ರಾಯಚೂರು ಲೇಟೆಸ್ಟ್​​ ಅಪ್ಡೇಟ್​​ ನ್ಯೂಸ್​​

ಲಸಿಕಾಕರಣ ಸಮರ್ಪಕವಾಗಿ ನಡೆಸುವಲ್ಲಿ ಅಸಹಕಾರ ತೋರಿದ 16 ಕಾಲೇಜುಗಳಿಗೆ ರಾಯಚೂರು ಸಹಾಯಕ ಆಯುಕ್ತ ಸಂತೋಷ್ ಕಾಮಗೌಡರಿಂದ ನೋಟಿಸ್ ಜಾರಿ ಮಾಡಲಾಗಿದೆ.

raichur
ರಾಯಚೂರು
author img

By

Published : Jun 30, 2021, 3:04 PM IST

ರಾಯಚೂರು: ಕೋವಿಡ್ 2ನೇ ಅಲೆ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮವಾಗಿ ಪದವಿ ಕಾಲೇಜು ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಬೆಂಬಲ ಸಿಬ್ಬಂದಿಗೆ ಜಿಲ್ಲಾಡಳಿತ ಲಸಿಕಾ ಅಭಿಯಾನವನ್ನು ನಡೆಸುತ್ತಿದೆ. ಈ ಲಸಿಕಾಕರಣ ಸಮರ್ಪಕವಾಗಿ ನಡೆಸುವಲ್ಲಿ ಅಸಹಕಾರ ತೋರಿದ ಜಿಲ್ಲೆಯ 16 ಖಾಸಗಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಿಗೆ ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.

raichur
ನೋಟಿಸ್​ ಪ್ರತಿ

ಕೋವಿಡ್ ಲಸಿಕೆ ಹಾಕಿಸುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಖಾಸಗಿ ಕಾಲೇಜುಗಳು ಪ್ರಾಂಶುಪಾಲರಿಗೆ ಮಾಹಿತಿಯನ್ನು ನೀಡುವಂತೆ ಹಲವು ಬಾರಿ ತಿಳಿಸಲಾಗಿದೆ. ಆದರೆ ಮಾಹಿತಿಯನ್ನು ಸಕಾಲದಲ್ಲಿ ನೀಡದೆ ನಿರ್ಲಕ್ಷ್ಯವನ್ನು ತೋರಿಸಲಾಗಿದೆ. ಹೀಗಾಗಿ ಕೋವಿಡ್-19 ಅಪಾಯಕಾರಿ ಸಾಂಕ್ರಾಮಿಕ ರೋಗ ತಡೆಗಟ್ಟುವ ಲಸಿಕಾಕರಣದಂತಹ ಮಹತ್ತರವಾದ ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಕಾರ್ಯದ ಕುರಿತಾಗಿ ಕಾಲೇಜುಗಳ ವಿರುದ್ಧ ಡಿಎಂಎ ಆ್ಯಕ್ಟ್​ ಹಾಗೂ ಐಪಿಸಿ ಸೆಕ್ಷನ್ 188, 269, 270 ಮತ್ತು ಇತರ ಸಕ್ಷಮ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸಹಾಯಕ ಆಯುಕ್ತರು ಮುಂದಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.