ETV Bharat / state

ರಥವನೇರಿದ ಶ್ರೀ ಗುರು ರಾಘವೇಂದ್ರ ರಾಯರು.. ಮಂತ್ರಾಲಯದಲ್ಲಿ ಉತ್ತರಾರಾಧನೆ ವೈಭವ.. - ಶ್ರೀರಾಘವೇಂದ್ರ ಸ್ವಾಮಿಗಳ 350 ನೇ ಆರಾಧನಾ ಮಹೋತ್ಸವ

ರಥೋತ್ಸವದ ಹಿನ್ನೆಲೆಯಲ್ಲಿ ಸ್ಥಳೀಯ ಹಾಗೂ ದೇಶದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದಾರೆ. ರಥೋತ್ಸವ ಚಾಲನೆಗೂ ಮುನ್ನ ಪೀಠಾಧಿಪತಿಗಳಾದ ಶ್ರೀ ಸುಬುದೇಂದ್ರ ತೀರ್ಥರು ಆಶೀರ್ವಚನ ನೀಡಿದರು..

Raghavendra Swamy Chariot festival in Mantralaya
ರಥವನೇರಿದ ರಾಘವೇಂದ್ರ..
author img

By

Published : Aug 25, 2021, 3:32 PM IST

Updated : Aug 25, 2021, 3:39 PM IST

ರಾಯಚೂರು : ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಇಂದು ಉತ್ತಾರಾರಾಧಾನೆ ನಿಮಿತ್ತವಾಗಿ ಮಹಾ ರಥೋತ್ಸವ ನಡೆಯಿತು. ಶ್ರೀಮಠದ ರಥ ಬೀದಿಗಳಲ್ಲಿ ಪ್ರಹ್ಲಾದ ರಾಜರ ಮೂರ್ತಿಯನ್ನು ಇರಿಸಿ‌ ಮಹಾ ರಥೋತ್ಸವ ನೆರವೇರಿಸಲಾಯಿತು. ವಿವಿಧ ಕಲಾ ತಂಡಗಳು, ವಾದ್ಯ-ಮೇಳಗಳೊಂದಿಗೆ ವೈಭವದ ರಥೋತ್ಸವ ಜರುಗಿತು.

ರಥವನೇರಿದ ಶ್ರೀ ಗುರು ರಾಘವೇಂದ್ರ ರಾಯರು..

ಶ್ರೀಗುರು ರಾಯರು ಬೃಂದಾವನಸ್ಥರಾಗಿ‌ 350 ವರ್ಷಗಳು ಸಂದಿವೆ. ಉತ್ತಾರಾರಾಧನೆ ವಿಶೇಷವಾಗಿ ಮೂಲ ಬೃಂದಾವನಕ್ಕೆ ಪುಷ್ಪಾಂಲಕಾರ ಮಾಡಲಾಗಿತ್ತು. ವಿಶೇಷ ಪೂಜೆ-ಪುನಸ್ಕಾರಗಳನ್ನು ನೆರವೇರಿಸಲಾಯಿತು.

ರಥೋತ್ಸವದ ಹಿನ್ನೆಲೆಯಲ್ಲಿ ಸ್ಥಳೀಯ ಹಾಗೂ ದೇಶದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದಾರೆ. ರಥೋತ್ಸವ ಚಾಲನೆಗೂ ಮುನ್ನ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿದರು.

ಓದಿ : ರಾಯರ 350ನೇ ಆರಾಧನಾ ಮಹೋತ್ಸವ: ಸಿಂಗಾರಗೊಂಡ ಮಂತ್ರಾಲಯ

Last Updated : Aug 25, 2021, 3:39 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.