ರಾಯಚೂರು: ಕಲಿಯುಗದ ಕಾಮಧೇನು ಎಂಬ ಪ್ರಸಿದ್ಧಿಯ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ (ಸಪ್ತರಾತ್ರೋತ್ಸವ) ಆರಾಧನಾ ಮಹೋತ್ಸವಕ್ಕೆ ವೈಭವದ ಚಾಲನೆ ದೊರೆಯಿತು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಧ್ವಜಾರೋಹಣ ನೆರವೇರಿಸಿ ಆರಾಧನೆಗೆ ಚಾಲನೆ ಕೊಟ್ಟರು. ಗೋ, ಅಶ್ವ, ಧಾನ್ಯ ಪೂಜೆಗಳನ್ನೂ ಶ್ರೀಗಳು ನೆರವೇರಿಸಿದರು.
ಇದಾದ ಬಳಿಕ ಶ್ರೀಮಠದ ಮುಂಭಾಗದಲ್ಲಿ ನಿರ್ಮಿಸಿರುವ ಮಧ್ವ ದ್ವಾರವನ್ನು ಲೋಕಾರ್ಪಣೆ ಮಾಡಲಾಯಿತು. ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ವಿಶೇಷ ಹೂವಿನ ಅಲಂಕಾರ, ಝಗಮಗಿಸುವ ವಿದ್ಯುದ್ದೀಪ ಮಾಡಲಾಗಿತ್ತು.
ಇಂದಿನಿಂದ (ಆಗಸ್ಟ್ 10) 16 ರ ವರೆಗೆ ಒಟ್ಟು ಏಳು ದಿನಗಳ ಕಾಲ ಸಪ್ತರಾತ್ರೋತ್ಸವ ನಡೆಯಲಿದೆ. ಆಗಸ್ಟ್ 12 ರಂದು ಪೂರ್ವಾರಾಧನೆ, 13 ರಂದು ಮಧ್ಯಾರಾಧನೆ, 14 ರಂದು ಉತ್ತರರಾಧನೆ ನಡೆಯಲಿದೆ. ಉತ್ತರರಾಧನೆ ದಿನ ಮಠದ ರಥ ಬೀದಿಯಲ್ಲಿ ಮಹಾರಥೋತ್ಸವ ಜರುಗಲಿದೆ.
ಇದನ್ನೂ ಓದಿ: ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವಕ್ಕೆ ಸಕಲ ಸಿದ್ಧತೆ