ETV Bharat / state

ನರೇಂದ್ರ ಮೋದಿ ದೇಶದ ಬೇಜವಾಬ್ದಾರಿ ಪ್ರಧಾನಿ: ಎಸ್‌.ಆರ್‌.ಹಿರೇಮಠ ಆಕ್ರೋಶ - Corona Latest News

ಲಾಕ್​​ಡೌನ್​​ ವೇಳೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ವಲಸೆ ಕಾರ್ಮಿಕರು ಸಾವು ನೋವು ಎದುರಿಸುವಂತಾಯಿತು ಎಂದು ಸಾಮಾಜಿಕ ಕಾರ್ಯಕರ್ತ ಎಸ್​​​.ಆರ್​.ಹಿರೇಮಠ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Prime Minister Narendra Modi is the country's irresponsible prime minister: Hiremata
‘ಪ್ರಧಾನಿ ನರೇಂದ್ರ ಮೋದಿ ದೇಶದ ಬೇಜವಾಬ್ದಾರಿ ಪ್ರಧಾನಿ’: ಹಿರೇಮಠ ಆಕ್ರೋಶ
author img

By

Published : Jul 10, 2020, 5:01 PM IST

ರಾಯಚೂರು: ನರೇಂದ್ರ ಮೋದಿ ದೇಶದ ಬೇಜವಾಬ್ದಾರಿ ಪ್ರಧಾನಿಮಂತ್ರಿ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್​​​ಡೌನ್ ವೇಳೆ ಪ್ರಧಾನಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಸ್‌.ಆರ್‌.ಹಿರೇಮಠ ಟೀಕೆ

ಯಾವುದೇ ಮುಂಜಾಗೃತಾ ಕ್ರಮ ತೆಗೆದುಕೊಳ್ಳದ ಕಾರಣ ವಲಸೆ ಕಾರ್ಮಿಕರ ಸಾವು ನೋವು ಸಂಭವಿಸಿತ್ತು. ನೋಟ್ ಬ್ಯಾನ್​​​ನಿಂದ ಸಾವಿರಾರು ಜನರು ನೌಕರಿ ಕಳೆದುಕೊಂಡರು. ಈಗ ಲಾಕ್​​​ಡೌನ್​​ನಿಂದ 10 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್​​​​ಡೌನ್ ಮಾಡುವ ಮುನ್ನ ಯೋಚಿಸಿ ನಿರ್ಧಾರವನ್ನು ಕೈಗೊಂಡು, ನಾಲ್ಕು ದಿನಗಳ ಮೊದಲು ಸೂಚನೆ ನೀಡಿ ಲಾಕ್​​​ಡೌನ್ ಘೋಷಣೆ ಮಾಡಬೇಕಾಗಿತ್ತು. ವಲಸೆ ಕಾರ್ಮಿಕರ ಬಗ್ಗೆ ಚಿಂತೆ ಇಲ್ಲದೆ ಲಾಕ್​​ಡೌನ್ ಮಾಡಿದ್ದು ಮಹಾ ಮೂರ್ಖತನ ನಿರ್ಧಾರ ಎಂದರು.

ಕೊರೊನಾ ಎದುರಿಸಲು ನಾವೆಲ್ಲರೂ ಒಂದಾಗಬೇಕು. ಪಕ್ಷಭೇದ ಬದಿಗಿಟ್ಟು ಕೊರೊನಾ ವಿರುದ್ಧ ಹೋರಾಡಬೇಕು. ಸರ್ಕಾರದ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.