ರಾಯಚೂರು: ತುಂಗಾ ತೀರದಲ್ಲಿ ನೆಲೆಸಿರುವ ಕಲಿಯುಗ ಕಾಮಧೇನು, ಕಲ್ಪವೃಕ್ಷ ಎಂದೇ ಪ್ರಸಿದ್ಧಿ ಪಡೆದಿರುವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಇಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿ ಶ್ರೀಗುರು ರಾಯರ ದರ್ಶನ ಪಡೆದರು.
ಮಠಕ್ಕೆ ಆಗಮಿಸಿದ ಸಚಿವರನ್ನು ಶ್ರೀಮಠದ ಸಂಪ್ರದಾಯದಂತೆ ಬರಮಾಡಿಕೊಳ್ಳಲಾಯಿತು. ಮೊದಲಿಗೆ ಗ್ರಾಮ ದೇವತೆ ಮಂಚಾಲ್ಲಮ್ಮ ದೇವಿ ದರ್ಶನ ಪಡೆದ ಜೋಶಿ ಅವರು ನಂತರ ರಾಯರ ಮೂಲ ಬೃಂದಾವನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಸಚಿವರನ್ನು ಆಶೀರ್ವದಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಿದ್ಯುತ್ ಸ್ಥಾವರಗಳಿಗೆ ಯಾವುದೇ ಕಲಿದ್ದಲ್ಲು ಸಮಸ್ಯೆಯಿಲ್ಲ, ಜೊತೆಗೆ ಕಲಿದ್ದಲ್ಲು ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಈಗ ಅಗತ್ಯಕ್ಕೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಮಂತ್ರಾಲಯಕ್ಕೆ ನವರತ್ನ ಖಚಿತ ಚಿನ್ನದ ಕವಚ ಕಾಣಿಕೆ ನೀಡಿದ ಉದ್ಯಮಿ