ರಾಯಚೂರು: ಸರ್ಕಾರ ಅಶಕ್ತರಿಗೆ, ವಯೋ ವೃದ್ಧರಿಗೆ, ವಿಕಲಚೇತನರಿಗೆ, ವಿಧವೆಯರಿಗೆ ಪಿಂಚಣಿ ರೂಪದಲ್ಲಿ ಸಹಾಯಧನ ನೀಡುತ್ತದೆ. ಇದನ್ನ ಕಾಲ ಕಾಲಕ್ಕೆ ಸರ್ಕಾರ ಪಾವತಿ ಮಾಡಬೇಕಾಗಿದ್ದು, ಅಂಚೆ ಕಚೇರಿಯ ಮೂಲಕ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಪೋಸ್ಟ್ ಮ್ಯಾನ್ ಮಾಡಬೇಕು. ಆದ್ರೆ ಇಲ್ಲೊಬ್ಬ ಪೋಸ್ಟ್ ಮ್ಯಾನ್ ಹಲವು ಪಿಂಚಣಿ ಯೋಜನೆಯ 9 ತಿಂಗಳ ಹಣವನ್ನ ತಾನೇ ಬಳಸಿಕೊಂಡಿರುವ ಆರೋಪ ಕೇಳಿ ಬಂದಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಾರಾಪುರ ಗ್ರಾಮದ ನಿವಾಸಿಗಳಿಗೆ ಸರ್ಕಾರದಿಂದ ನೀಡುವ ವೃದ್ಧಾಪ್ಯ ವೇತನ, ವಿಧೆವಾ ಮಾಶಾಸನ, ವಿಕಲಚೇತನ ಪಿಂಚಣಿ ಯೋಜನೆಯ ಹಣ ಮೊದಲೆಲ್ಲ ಪ್ರತಿ ತಿಂಗಳು ಬರದಿದ್ದರೂ ತಡವಾಗಿಯಾದರೂ ಸೇರುತ್ತಿತ್ತು. ಆದ್ರೆ ಇದೀಗ ಕಳೆದ ಒಂಭತ್ತು ತಿಂಗಳಿನಿಂದ ಪಿಂಚಣಿ ಯೋಜನೆ ಹಣ ಕೈಗೆ ಸೇರಿದೆ ಕಂಗಾಲಾಗಿದ್ದು, ನಮಗೆ ಪಿಂಚಣಿ ಯೋಜನೆಯ ಹಣ ಕೊಡಿಸಿ ಎಂದು ಫಲಾನುಭವಿಗಳು ಒತ್ತಾಯಿಸುತ್ತಿದ್ದಾರೆ.
ಇನ್ನು ಹಾರಾಪುರ ಗ್ರಾಮದಲ್ಲಿ ನೂರಾರು ಜನರು ಪಿಂಚಣಿಗೆ ಅರ್ಹರಿದ್ದರೆ. ಇವರಿಗೆ ಸರ್ಕಾರದಿಂದ ಬರಬೇಕಾದ ಹಣ ಅಂಚೆ ಇಲಾಖೆಗೆ ಸೇರಿದೆ. ಈ ಮೂಲಕ ಗ್ರಾಮದ ವ್ಯಾಪ್ತಿಗೆ ಬರುವ ಪೋಸ್ಟ್ ಮ್ಯಾನ್ ಹಣವನ್ನ ತಲುಪಿಸಬೇಕು. ಆದ್ರೆ ಗ್ರಾಮಕ್ಕೆ ಬರುವ ಯಂಕನಗೌಡ ಎಂಬ ಪೋಸ್ಟ್ ಮ್ಯಾನ್ 9 ತಿಂಗಳ ಹಣವನ್ನ ನಕಲಿ ಸಹಿ ಮಾಡುವ ತಾನೇ ಗುಳಂ ಮಾಡಿದ್ದು, ಇದನ್ನ ಪ್ರಶ್ನೆ ಮಾಡುವವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕುತ್ತಿದ್ದಾನೆಂದು ಗ್ರಾಮಸ್ಥರು ದೂರಿದ್ದಾರೆ.