ರಾಯಚೂರು: ನಗರದ ಹೊರವಲಯದಲ್ಲಿರುವ ಮನ್ಸಲಾಪುರ ಗ್ರಾಮದ ಕೆರೆಗೆ ವಿಷಪೂರಿತ ಕೆಮಿಕಲ್ ನೀರನ್ನು ಬಿಡುತ್ತಿದ್ದ ಲಾರಿಯನ್ನು ಗ್ರಾಮಸ್ಥರು ವಶಕ್ಕೆ ಪಡೆದಿದ್ದಾರೆ.
ಕೈಗಾರಿಕಾ ವಲಯದಿಂದ ರಾತ್ರೋರಾತ್ರಿ ಈ ರೀತಿ ಕೆಮಿಕಲ್ ನೀರನ್ನು ಕೆರೆಗೆ ಹರಿಸಲಾಗುತ್ತಿತ್ತು. ಇದರಿಂದ ಜಲಚರಗಳು ಮೃತಪಟ್ಟು, ಬೆಳೆಗೆ ಹರಿಸಿದರೆ ಬೆಳೆಯೆಲ್ಲ ಸುಟ್ಟು ಹೋಗುತ್ತಿತ್ತು. ಗ್ರಾಮಸ್ಥರಿಗೆ ಕಳೆದ ರಾತ್ರಿ ಕೆಮಿಕಲ್ ಸಾಗಿಸುತ್ತಿದ್ದ ಲಾರಿ ಸಿಕ್ಕಿದ್ದು, ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಹೀಗಾಗಿ ಕೂಡಲೇ ತನಿಖೆ ನಡೆಸಿ ರಾಸಾಯನಿಕವನ್ನು ಅವೈಜ್ಞಾನಿಕ ವಿಲೇವಾರಿ ಮಾಡುತ್ತಿದ್ದ ಕಂಪನಿಯನ್ನು ಸೀಜ್ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.