ETV Bharat / state

ಪರಿಸರ ಸ್ನೇಹಿ ಗಣೇಶ ಹಬ್ಬಕ್ಕಾಗಿ ಪ್ಲಾನ್: ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಪೊಲೀಸ್ ಇಲಾಖೆ - Eco-friendly Ganesh

ಈ ಬಾರಿಯ ಗೌರಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಮತ್ತು ಹಬ್ಬದ ಸಂದರ್ಭದಲ್ಲಿ ಕೋಮು ಸೌಹಾರ್ಧತೆ ಕಾಪಾಡಲು ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ಪಣತೊಟ್ಟಿದ್ದು, ಇದಕ್ಕಾಗಿ ಎಸ್ಪಿ ಅವರ ಸಂದೇಶವಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

ರಾಯಚೂರು ಎಸ್ಪಿ ಡಾ. ಸಿಬಿ.ವೇದಮೂರ್ತಿಯಿಂದ ವೀಡಿಯೋ ಸಂದೇಶ
author img

By

Published : Aug 19, 2019, 2:23 PM IST

ರಾಯಚೂರು: ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಪಿಒಪಿ ಗಣೇಶ ಹಾಗೂ ಬೃಹದಾಕಾರದ ಡಿಜೆ ಸೆಟ್​ಗಳಿಂದ ಕೂಡಿದ ಮೆರವಣಿಗೆಗೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ಉಪಾಯ ಮಾಡಿದ್ದು, ಇದಕ್ಕಾಗಿ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದೆ.

ಗೌರಿ ಗಣೇಶ ಹಬ್ಬವನ್ನು ಕೋಮು ಸೌಹಾರ್ದತೆ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸುವ ಸಲುವಾಗಿ ಡಿಜೆ ಬ್ಯಾನ್ ಮಾಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಡಿ.ಜೆ ಮಾಲೀಕರಿಗೆ ಹೆಚ್ಚಿನ ಡಿಜೆ ಸೆಟ್ ಗಳು ಮಾರಾಟ ಮಾಡದಂತೆ ಪೊಲೀಸ್ ಇಲಾಖೆ ನೋಟಿಸ್ ನೀಡಿದ್ದು, ಉಲ್ಲಂಘನೆ ಮಾಡಿದ್ದಲ್ಲಿ ಡಿಜೆ ಜಪ್ತಿ ‌ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಲಾಗಿದೆ.

ರಾಯಚೂರು ಎಸ್ಪಿ ಡಾ. ಸಿಬಿ.ವೇದಮೂರ್ತಿಯಿಂದ ವೀಡಿಯೋ ಸಂದೇಶ

ಸ್ವತಃ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ವೇದಮೂರ್ತಿ ವಿಡಿಯೋದಲ್ಲಿ ಮಾತನಾಡಿದ್ದು, ಪರಿಸರ ಕಾಳಜಿಗೆ ಹೆಚ್ಚು ಮಹತ್ವ ಕೊಡುವ ನಿಟ್ಟಿನಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆಯಿಂದ 100 ರೈತ ಸ್ನೇಹಿ ಗಣಪ ತಯಾರಿಸಲಾಗಿದೆ. ಅದರಲ್ಲಿ ತುಳಸಿ ಹಾಗೂ ತರಕಾರಿ ಬೀಜ ಹಾಕಲಾಗಿದೆ. ಈ ಗಣಪನನ್ನು ನೀರಲ್ಲಿ ವಿಸರ್ಜನೆ ಮಾಡುವ ಅವಶ್ಯಕತೆಯಿಲ್ಲ. ಹಬ್ಬದ ಬಳಿಕ ಮನೆಯ ಹೂ ಕುಂಡದಲ್ಲಿ ಹಾಕಿದರೆ ಮನೆಗೆ ಉಪಯೋಗವಾಗಲಿದೆ ಹಾಗೂ ಸದಾ ಗಣೇಶನ ಆಶಿರ್ವಾದ ಇರಲಿದೆ ಎಂದು ಹೇಳಿದ್ದಾರೆ. ಜೊತೆಗೆ ಹಬ್ಬವನ್ನು ಶಾಂತಿ ಸುವ್ಯವಸ್ಥೆ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಲು ಪೊಲೀಸ್ ಇಲಾಖೆ ಒತ್ತು ನೀಡಿದ್ದು, ಸಾರ್ವಜನಿಕರು ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.

ಪೊಲೀಸ್ ಇಲಾಖೆಯಿಂದ ರಚಿಸಿದ ಈ ವಿಡಿಯೋ ಸಂದೇಶ ಎಲ್ಲರ ವಾಟ್ಸ್​ಆ್ಯಪ್​​, ಫೇಸ್​​​ಬುಕ್​​ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಅಗಿದೆ.

ಇನ್ನೇನು ಕೆಲವೇ ದಿನಗಳಲ್ಲಿ ಗೌರಿ ಗಣೇಶ ಹಬ್ಬ ಆರಂಭವಾಗಲಿದ್ದು ಎಲ್ಲೆಡೆ ಈಗ ಪಿಒಪಿ ಗಣೇಶ ಹಾಗೂ  ಬೃಹದಾಕಾರದ ಡಿಜೆ ಸೆಟ್ಗಗಳಿಂದ ಮೆರವಣಿಗೆ ಮಾಡುವುದು ಸಾಮಾನ್ಯ ಆದ್ರೆ  ಇದನ್ನು ಕಡಿವಾಣ ಹಾಕಲು   ರಾಯಚೂರು ಪೊಲೀಸ್ ಇಲಾಖೆ ಒಂದು ಉಪಾಯ ಮಾಡಿದೆ.
ಅದು ಏನಂತಿರಾ,
ಗೌರಿ ಗಣೇಶ ಹಬ್ಬವೂ ಕೋಮು ಸೌಹಾರ್ದತೆ ಹಾಗೂ ಪರಿಸರ ಸ್ನೇಹಿ ಆಗಿ ಆಚರಿಸಲು ಮುಂದಾಗಿ, ನ್ಯಾಯಾಲಯದಿಂದ ಡಿಜೆ ಬ್ಯಾನ್ ಮಾಡಿದ್ದು ಇದಕ್ಕಾಗಿಯೇ ಡಿ.ಜೆ ಮಾಲೀಕರಿಗೆ ಹೆಚ್ಚಿನ ಡಿಜೆ ಸೆಟ್ ಗಳು ಮಾರಾಟ ಮಾಡದಂತೆ ನೋಟಿಸ್ ನೀಡಲಾಗಿದೆ ನಿವೇನಾದ್ರೂ ಉಲ್ಲಂಘನೆ ಮಾಢಿದ್ದಲ್ಲಿ ಡಿಜೆ ಜಪ್ತಿ‌ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ವಿಡಿಯೋ ಸಂದೇಶ ರವಾನೆ ಮಾಡಿದ್ದಾರೆ.
ಅಲ್ಲದೇ ಪರಿಸರ ಕಾಳಜಿಗೆ ಹೆಚ್ಚು ಮಹತ್ಚ ಕೊಡುವ ರಾಯಚೂರು ಎಸ್ಪಿ ವೇದ ಮೂರ್ತಿ ಅವರು, ಪೊಲೀಸ್ ಇಲಾಖೆಯಿಂಗ 100 ರೈತ ಸ್ನೇಹಿ ಗಣಪ ತಯಾರಿಸಿದ್ದು ಅದ್ರಲ್ಲಿ ತುಳಸಿ ಹಾಗೂ ತರಕಾರಿ ಬೀಜ ಹಾಕಿದ್ದು ಈ ಗಣಪನಿಗೆ ನೀರಲ್ಲಿ ವಿಸರ್ಜನೆ ಮಾಡುವ ಅವಶ್ಯಕತೆ ಯಿಲ್ಲ  ಹಬ್ಳಬದ ನಂತರ ಮನೆಯ ಹೂ ಕುಂಡದಲ್ಲಿ ಹಾಕಿದರೆ ಮನೆಗೆ ಉಪಯೋಗ ವಾಗಲಿದೆ ಹಾಗೂ ಸದಾ ಗಣೇಶನ ಆಶಿರ್ವಾದ ಇರಲಿದೆ ಎಂದು ವಿಡಿಯೋ ದಲ್ಲಿ ಹೇಳುವ ಜೊತೆಗೆ ಹಬ್ಬವನ್ನು ಶಾಂತಿ ಸುವ್ಯವಸ್ಥೆ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಲು ಪೊಲೀಸ್ ಇಲಾಖೆ ಒತ್ತು ನೀಡಿದ್ದು ಸಾರ್ವಜನಿಕರು ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.
ಪೊಲೀಸ್ ಇಲಾಖೆಯಿಂದ ರಚಿಸಿದ ಈ ವಿಡಿಯೋ ಎಸ್.ಪಿ.ಅವರು ನೀಡಿದ ಸಂದೇಶ ಎಲ್ಲರ ವಾಟ್ಸಪ್ ಫೆಸ್ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಅಗಿದೆ.
 ರಾಯಚೂರು ಜಿಲ್ಲೆಗೆ ಇತ್ತೀಚೆಗೆ ಕೆಲ ತಿಂಗಳ ಹಿಂದೆ ಬಂದ ಎಸ್ಪಿ ಸಿಬಿ ವೇದ ಮೂರ್ತಿಯವರು ಅಕ್ರಮ ಮರಳು ಅಡ್ಡೆಗಳ ಮೇಲೆ ಕಡಿವಾಣ,ಸೂಕ್ತ ಸಂಚಾರ ವ್ಯವಸ್ಥೆ ,ಸಾರವಜನಿಕರ ಅಸ್ತಿ  ರಕ್ಷಣೆಗೆ ಹಲವಾರು ಸುಧಾರಣೆ  ಮಾಡುವ ಮೂಲಕ ನಾಗರಿಕರ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.