ರಾಯಚೂರು: ಮಹಾರಾಷ್ಟ್ರದಿಂದ ಕೊಯ್ನಾ ಡ್ಯಾಂ ಮೂಲಕ ಕೃಷ್ಣ ನದಿಗೆ ನೀರು ಹರಿಬಿಡುತ್ತಿರುವ ಕಾರಣ ರಾಯಚೂರು ತಾಲೂಕಿನ ಕೆಲ ಹಳ್ಳಿಗಳು ಪ್ರವಾಹಭೀತಿಗೆ ಸಿಲುಕಿವೆ.
ರಾಯಚೂರು ತಾಲೂಕಿನ ಆತ್ಕೂರು ಗ್ರಾಮದಲ್ಲಿಯೂ ನೀರು ಹರಿಯುತ್ತಿದ್ದು ಗಡಿ ಭಾಗಕ್ಕೆ ಸೇರಿದ ಗ್ರಾಮವಾದ ಇಲ್ಲಿಂದ ಕುರ್ವಕಲಾ, ಅಗ್ರಹಾರ ಸೇರಿ ಇತರೆ ಗ್ರಾಮಗಳಿಗೆ ಹೋಗಲು ತೆಪ್ಪ, ಬೋಟ್ ಮೂಲಕ ಹೋಗಬೇಕಾಗಿದೆ. ಇಲ್ಲಿಂದ ಶಾಲೆಗೆ ಹೋಗಬೇಕಾದ್ರೂ ಮಕ್ಕಳು ಬೋಟ್‌ನಲ್ಲಿ ಬರಬೇಕಾಗಿದೆ.
ಕುರ್ವಕಲಾ ಗ್ರಾಮದಲ್ಲಿ ಸುಮಾರು 150 ಕುಟುಂಬಗಳಿದ್ದು ಸಿಟಿಗೆ ಹಾಗೂ ಆತ್ಕೂರಿಗೆ ಬರಬೇಕಾದರೆ ತೆಪ್ಪದ ಮೂಲಕ ಬರಬೇಕಿದೆ. ಅಲ್ಲದೇ ಧವಸ ಧಾನ್ಯ,ಕವಳೆ ಮಾರಾಟ ಮಾಡಲು ತೆಪ್ಪದ ಮೂಲಕವೇ ಹೋಗಬೇಕು. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು, ಇದಕ್ಕೆ ಪರ್ಯಾಯ ವ್ಯವಸ್ಥೆ ರೂಪಿಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.