ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ವರ್ದಂತೋತ್ಸವ ಹಾಗೂ ಪಟ್ಟಾಭಿಷೇಕ ಹಿನ್ನೆಲೆಯಲ್ಲಿ ತಿರುಪತಿ ತಿರುಮಲ ದೇವಾಲಯದಿಂದ ಪಟ್ಟಾವಸ್ತ್ರ ಸಮರ್ಪಣೆ ಮಾಡಲಾಗಿದೆ.
ಬೆಳಗ್ಗೆ ಎಂದಿನಂತೆ ಮೂಲ ವೃಂದಾವನಕ್ಕೆ ಅಭಿಷೇಕ, ನಿರ್ಮಲ ವಿಸರ್ಜನೆ ಸೇರಿದಂತೆ ವಿವಿಧ ಪೂಜೆಗಳು ಜರುಗಿದವು. ಬಳಿಕ ತಿರುಪತಿಯಿಂದ ಆಗಮಿಸಿದ ಪಟ್ಟವಸ್ತ್ರವನ್ನ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರ ನೇತೃತ್ವದಲ್ಲಿ ಸ್ವೀಕರಿಸಿ, ರಾಯರಿಗೆ ಅರ್ಪಿಸಿದ್ರು.
ಪಟ್ಟಾಭಿಷೇಕ ಹಿನ್ನೆಲೆಯಲ್ಲಿ ದೇಶದ ನಾನಾ ಭಾಗಗಳಿಂದ ಭಕ್ತರು ರಾಯರ ಮಠಕ್ಕೆ ಆಗಮಿಸುತ್ತಿದ್ದು, ಶ್ರೀಮಠವನ್ನ ವಿಶೇಷ ಪುಷ್ಪಾಲಂಕಾರ ಮಾಡಲಾಗಿದೆ. ತಮಿಳುನಾಡಿನ ನಾದಹಾರ ಟ್ರಸ್ಟಿನಿಂದ ನಾದಹಾರ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.