ರಾಯಚೂರು: ಬಾವಿಯಲ್ಲಿ ಬಿದ್ದಿದ್ದ ಎತ್ತನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ವಡ್ಲೂರು ಗ್ರಾಮದ ಹೊರವಲಯದಲ್ಲಿ ಎರಡು ಎತ್ತುಗಳ ನಡುವೆ ಕಾದಾಟ ನಡೆದಿದೆ. ಈ ವೇಳೆ ಗಂಜಳ್ಳಿ ಹುಸೇನಪ್ಪ ಎನ್ನುವರಿಗೆ ಸೇರಿದ ಎತ್ತು ಬಾವಿಗೆ ಬಿದ್ದಿದೆ. ಇದನ್ನ ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳದ ಮಾಹಿತಿ ನೀಡಿದ್ದರು.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದ ಸಿಬ್ಬಂದಿ ಬಾವಿಯಿಂದ ಎತ್ತಿಗೆ ಬೆಲ್ಟ್ ಹಾಗೂ ಹಗ್ಗ ಕಟ್ಟಿ, ಕ್ರೇನ್ ನೆರವಿನಿಂದ ಸುರಕ್ಷಿತವಾಗಿ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದರಿಂದ ಎತ್ತು ಪ್ರಾಣಾಪಾಯದಿಂದ ಪಾರಾಗಿದೆ.
ಅಗ್ನಿಶಾಮಕ ದಳದ ವಿಶೇಷಾಧಿಕಾರಿ ಗುರುಪಾದಪ್ಪ ತೇಲಿ, ಪ್ರಮುಖರಾದ ಮಾರುತಿ, ಸಿಬ್ಬಂದಿಯಾದ ಅಂಬರೇಶ, ಪಿಟ್ಟಪ್ಪ, ದತ್ತಾತ್ರೇಯ, ಶಿವಕುಮಾರ್ ಸೇರಿದಂತೆ ಸ್ಥಳೀಯರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.