ರಾಯಚೂರು: ಮರದ ಕೆಳಗಡೆ ನಿಂತಾಗ ಸಿಡಿಲು ಬಡಿದು ಓರ್ವ ಕುರಿಗಾಹಿ ಹಾಗೂ 20ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಸಿರವಾರ ತಾಲೂಕಿನ ಆನಂದಗಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೇದಿನಾಪುರ ಗ್ರಾಮದ ಕುರಿಗಾಹಿ ಈರಪ್ಪ(32) ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ. ಈತನ ಜತೆಯಲ್ಲಿದ್ದ 20ಕ್ಕೂ ಅಧಿಕ ಕುರಿಗಳು ಬಲಿಯಾಗಿವೆ.
ಘಟನೆ ಸಂಬಂಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.