ರಾಯಚೂರು : ಇದು 20 ಪರ್ಸೆಂಟ್ ಸರ್ಕಾರ. ವಿಜಯೇಂದ್ರನಿಗೆ ದುಡ್ಡು ಕೊಟ್ಟರೆ ಅನುದಾನ ಟ್ರಾನ್ಸಫರ್ ಆಗುತ್ತೆ. ಯಡಿಯೂರಪ್ಪ ಕೇವಲ ಸಹಿ ಮಾಡುತ್ತಾರೆ. ವಿಜಯೇಂದ್ರ ಡಿ ಫ್ಯಾಕ್ಟರ್ ಚೀಫ್ ಮಿನಿಸ್ಟರ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸಿಂಧನೂರು ತಾಲೂಕಿನ ಪಗಡದಿನ್ನಿ ಕ್ಯಾಂಪ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಸಿಡಿ ವಿಚಾರವನ್ನು ಬಳಸಿಕೊಳ್ಳುವುದಿಲ್ಲ. ಈಶ್ವರಪ್ಪ-ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಇದನ್ನು ಬೈ ಎಲೆಕ್ಷನ್ನಲ್ಲಿ ಬಳಸಿಕೊಳ್ಳುತ್ತೇವೆ. ಯತ್ನಾಳ್ ಹಾಗೂ ಈಶ್ವರಪ್ಪಗೆ ಆರ್ಎಸ್ಎಸ್ನ ಸಂತೋಷ್ ಬೆಂಬಲವಿದೆ. ಜೊತೆಗೆ ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬ ಉದ್ದೇಶವಿದೆ ಎಂದರು.
ಇದು 20 ಪರ್ಸೆಂಟ್ ಸರ್ಕಾರ. ವಿಜಯೇಂದ್ರನಿಗೆ ದುಡ್ಡು ಕೊಟ್ಟರೆ ಅನುದಾನ ಟ್ರಾನ್ಸಫರ್ ಆಗುತ್ತೆ, ಯಡಿಯೂರಪ್ಪ ಕೇವಲ ಸಹಿ ಮಾಡುತ್ತಾರೆ. ವಿಜಯೇಂದ್ರ ಡಿ ಫ್ಯಾಕ್ಟರ್ ಚೀಫ್ ಮಿನಿಸ್ಟರ್. ಯತ್ನಾಳ್ ನಿತ್ಯ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾನೆ. ಮೇ ತಿಂಗಳಲ್ಲಿ ಸರ್ಕಾರ ಬೀಳುತ್ತೆ ಅಂತಾನೆ. ಯತ್ನಾಳ್ ವಿರುದ್ಧ ಯಾಕೆ ಕ್ರಮಕೈಗೊಳ್ಳುತ್ತಿಲ್ಲ. ಇಷ್ಟೊಂದು ಪ್ರಮಾಣದ ಭ್ರಷ್ಟಾಚಾರದ ಸರ್ಕಾರವನ್ನ ನಾನು ನನ್ನ 40 ವರ್ಷದ ಅನುಭವದಲ್ಲಿ ನೋಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಚುನಾವಣೆಗೆ ನಿಲ್ಲತ್ತೇನೆ ಎಂದಿದ್ದ. ಆದರೆ, ನಿಂತಿಲ್ಲ. ಅಲ್ಲಿ 59 ಸಾವಿರ ಮತಗಳಿಂದ ಡಾ. ಯತೀಂದ್ರ ಗೆದ್ದಿದ್ದಾನೆ. ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ, ಯಡಿಯೂರಪ್ಪ ಕೊಡುಗೆ ಏನು? ಅಭಿವೃದ್ಧಿ ಮಾಡಿರುವುದು ನಾವು. ಜಾತಿ ಹೇಳಿಕೊಂಡು ಬಂದರೆ, ಮತದಾರರು ಬಿಟ್ಟುಕೊಡಲ್ಲ. ಯಾರಾದರೂ ಬಂದು ನಿಲ್ಲಲ್ಲಿ ನಾವು ಸ್ವಾಗತ ಮಾಡುತ್ತೇನೆ.
ಮಸ್ಕಿ ಕ್ಷೇತ್ರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮಟ್ಟದ ಬೆಂಬಲ ಸಿಗುತ್ತಿದೆ. ಬೀದರ್ನ ಬಸವಕಲ್ಯಾಣ ಕ್ಷೇತ್ರದಲ್ಲಿ ಅನುಕಂಪವಿದೆ. ಬೆಳಗಾವಿಯಲ್ಲಿ ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದೇವೆ. ಮೂರು ಬೈ ಎಲೆಕ್ಷನ್ನಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಓದಿ: ಸಾರಿಗೆ ನೌಕರರ ಮುಷ್ಕರ: ನಾಳೆ ರಸ್ತೆಗಿಳಿಯಲಿವೆ 2 ಸಾವಿರ ಹೆಚ್ಚುವರಿ ಖಾಸಗಿ ಬಸ್‌ಗಳು