ETV Bharat / state

ರಾಯಚೂರಲ್ಲಿ ನಿರಂತರ ಮಳೆ: ಮನೆ ಕುಸಿದು ಬಿದ್ದು ವೃದ್ಧ ಸಾವು - ರಾಯಚೂರಿನಲ್ಲಿ ಮನೆ ಕುಸಿದು ಬಿದ್ದು ವೃದ್ಧ ಸಾವು

ಮನೆ ಕುಸಿದು ಬಿದ್ದು ವೃದ್ಧ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದಿದೆ.

Old man dies in house collapse at Raichur
ರಾಯಚೂರಿನಲ್ಲಿ ಮನೆ ಕುಸಿದು ಬಿದ್ದು ವೃದ್ಧ ಸಾವು
author img

By

Published : Oct 2, 2022, 7:36 AM IST

ರಾಯಚೂರು: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಮನೆ ಕುಸಿದು ಬಿದ್ದು ವೃದ್ಧನೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದಿದೆ. ಮರಿಯಪ್ಪ ಚಿನಿವಾಲ್ (60) ಮೃತ ದುರ್ದೈವಿ.

ಶುಕ್ರವಾರ ತಡರಾತ್ರಿ ಮರಿಯಪ್ಪ ಹಾಗೂ ಕುಟುಂಬಸ್ಥರು ಮಲಗಿದ್ದ ವೇಳೆ ಏಕಾಏಕಿ ಮನೆ‌ ಕುಸಿದು ಬಿದ್ದಿದೆ. ಮನೆಯ ಅವಶೇಷಗಳಡಿ ಸಿಲುಕಿ ವೃದ್ಧ ಮರಿಯಪ್ಪ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬಳಗಾನೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಕೊಪ್ಪಳ: ಹಳ್ಳದಲ್ಲಿ ಕೊಚ್ಚಿ ಹೋದ ನಾಲ್ವರು ಮಹಿಳೆಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.