ರಾಯಚೂರು : ಕೊರೊನಾ ಸಂಕಷ್ಟದಲ್ಲಿ 5 ತಿಂಗಳಿನಿಂದ ಪಾವತಿಯಾಗದ ವೃದ್ಧಾಪ್ಯ, ವಿಧವಾ ಮಾಶಾಸನವನ್ನ ಪಾವತಿಸುವಂತೆ ಆಗ್ರಹಿಸಿ ವಿಧವೆಯರು, ವಯೋವೃದ್ದರು ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲು ಏರಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅವರು, ಸರ್ಕಾರದಿಂದ ಮಾಸಿಕವಾಗಿ ಪಾವತಿಸಬೇಕಾದ ಸಹಾಯ ಧನವನ್ನ ಪ್ರತಿ ತಿಂಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಆದ್ರೆ, ಕಳೆದ 5 ತಿಂಗಳಿನಿಂದ ಸರ್ಕಾರ ಈ ಹಣ ಪಾವತಿಸಿಲ್ಲ.
ಸರ್ಕಾರದಿಂದ ಬರುವ ಸಹಾಯ ಧನ ಜೀವನ ಸಾಗುತ್ತಿತ್ತು. ಆದ್ರೆ, ಕೊರೊನಾ ಲಾಕ್‌ಡೌನ್ ಸಂಕಷ್ಟದ ದಿನಗಳಲ್ಲಿ ನೀಡದೆ ಇರುವುದು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ಅಲ್ಲದೆ ಹೊರಗಡೆ ಕೆಲಸಕ್ಕೆ ಹೋಗಿ ಬರುವ ಹಣದಲ್ಲಿ ಜೀವನ ಸಾಗಿಸಬೇಕಾದ್ರೆ, ಲಾಕ್‌ಡೌನ್ ಕೆಲಸವಿಲ್ಲ. ಹೀಗಾಗಿ, ಕೆಲಸವೂ ಇಲ್ಲದೆ, ಇತ್ತ ಸರ್ಕಾರದಿಂದ ನೀಡುವ ಮಾಶಾಸನ ಇಲ್ಲದೆ ತೊಂದರೆಗೆ ಸಿಲುಕಿದ್ದೇವೆ. ನಮಗೆ 5 ತಿಂಗಳ ಮಾಶಾಸನವನ್ನ ಪಾವತಿಸಿ ಅಂತ ವಯೋ ವೃದ್ದರು, ವಿಧವೆಯರು ಆಗ್ರಹಿಸಿದ್ದಾರೆ.