ರಾಯಚೂರು: ತಾಯಿ ಕಾರ್ಡ್ ನೀಡಲು ಲಂಚದ ಬೇಡಿಕೆಯಿಟ್ಟಿದ ಆರೋಗ್ಯ ಇಲಾಖೆ ನರ್ಸ್ ಅಮಾನತುಗೊಂಡಿದ್ದಾರೆ.
ಮಸ್ಕಿ ತಾಲೂಕಿನ ಮಲ್ಲದಗುಡ್ಡದ ಉಪಆರೋಗ್ಯ ಕೇಂದ್ರದಲ್ಲಿ ಕಿರಿಯ ಸಹಾಯಕಿ ಸಾವಿತ್ರಿ ತಾಯಿ ಕಾರ್ಡ್ ನೀಡಲು ಲಂಚ ಬೇಡಿಕೆಯಿಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಕಾರ್ಡ್ ನೀಡಲು ಸಿಬ್ಬಂದಿ ಲಂಚ ಆರೋಪ: ವಿಡಿಯೋ ವೈರಲ್
ಕಿರಿಯ ಸಹಾಯಕಿ, ಹಣ ಕೊಡಲು ಒತ್ತಾಯಿಸಿದಲ್ಲದೆ, ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ದೂರು ನೀಡುವ ಬೆದರಿಕೆ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಹಿನ್ನೆಲೆಯಲ್ಲಿ ಆರೋಗ್ಯ ಸಹಾಯಕಿ ಆಮಾನತು ಮಾಡಿ ಜಿಲ್ಲಾ ಆರೋಗ್ಯಾಧಿಕಾರಿ ಆದೇಶಿಸಿದ್ದಾರೆ.