ರಾಯಚೂರು: ಕೊರೊನಾ ಭೀತಿ ನಡುವೆಯೂ ಸಚಿವ ಶ್ರೀರಾಮುಲು ಆಪ್ತ ನಾಗರಾಜ್ ನೆಕ್ಕಂಟಿ ತಮ್ಮ ಮಗಳ ವಿವಾಹವನ್ನು ಅದ್ಧೂರಿಯಾಗಿ ಮಾಡಿದ್ದಾರೆ.
ಜಿಲ್ಲೆಯ ಸಿಂಧನೂರು ಪಟ್ಟಣದ ಹೊರವಲಯದಲ್ಲಿರುವ ಕಲ್ಯಾಣ ಮಂಟಪದಲ್ಲಿ ವಿವಾಹ ಮಹೋತ್ಸವ ನಡೆದಿದೆ. 50 ಲಕ್ಷ ರೂ.ಗೂ ಅಧಿಕ ವೆಚ್ಚದಲ್ಲಿ ನಡೆದ ಸಮಾರಂಭದಲ್ಲಿ ಕೋವಿಡ್ ಭೀತಿ ಕಡೆಗಣಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಮದುವೆಯಲ್ಲಿ ಭಾಗಿಯಾದ ಬಹುತೇಕರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನೂ ಕಾಪಾಡಿಕೊಳ್ಳದಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಸಚಿವ ಶ್ರೀರಾಮುಲು ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಮದುವೆ ಮೆರವಣಿಯಲ್ಲಿ ವಿವಿಧ ಕಲಾ ತಂಡಗಳು, ನೂರಾರು ಮಂದಿ ಬಂಧುಗಳು ಭಾಗಿಯಾಗಿದ್ದರು.