ರಾಯಚೂರು: ಬರ್ಬರ ಕೊಲೆ ಪ್ರಕರಣದಿಂದ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಾರೆ. ತನ್ನ ವಿಚ್ಛೇದಿತ ಪತ್ನಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಆಕೆಯ ಮೊದಲ ಪತಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಲಿಂಗಸುಗೂರು ತಾಲೂಕಿನ ಗುಂತಗೋಳ ಗ್ರಾಮದಲ್ಲಿ ನಡೆದಿದೆ.
ಮೌನೇಶ್ ನಾಯಕ (29) ಕೊಲೆಯಾದ ವ್ಯಕ್ತಿ. ಮೌನೇಶ್ ವಿಚ್ಛೇದಿತ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಕಾರಣಕ್ಕೆ ಆಕೆ ಮೊದಲ ಪತಿ ಗುಂಡಪ್ಪ ನಾಯಕ ಹಾಗೂ ಆತನ ಸಹಚರರು ಗುಂತಗೋಳ ಗ್ರಾಮದ ದೇವಸ್ಥಾನದ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಮೌನೇಶ್ನನ್ನು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಹಿಳೆ ಪ್ರತಿಕ್ರಿಯೆ
ಗುಂಡಪ್ಪನಿಂದ ವಿಚ್ಛೇದನ ಪಡೆದ ಬಳಿಕ ಮೌನೇಶ್ ಕುಟುಂಬಸ್ಥರೊಂದಿಗೆ ವಾಸಿಸುತ್ತಿದ್ದೆ. ಅದೇ ದ್ವೇಷಕ್ಕೆ ಗುಂಡಪ್ಪ ಹಾಗೂ ಆತನ ಸಂಬಂಧಿಕರು ಮೌನೇಶ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಮಹಿಳೆ ದೂರಿದ್ದಾಳೆ.
ಸ್ಥಳಕ್ಕೆ ಡಿವೈಎಸ್ಪಿ ಎಸ್.ಎಸ್. ಹಳ್ಳೂರು, ಸಿಪಿಐ ಮಹಾಂತೇಶ್ ಸಜ್ಜನ್, ಪಿಎಸ್ಐ ಪ್ರಕಾಶ್ ರೆಡ್ಡಿ ಡಂಬಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಕೊಲೆ ಆರೋಪಿ ಗುಂಡಪ್ಪನನ್ನು ಬಂಧಿಸಿದ್ದು, ಸಹಚರರ ಬಂಧನಕ್ಕೆ ಜಾಲ ಬೀಸಿದ್ದಾರೆ.
ಇದನ್ನೂ ಓದಿ: ಮೂರು ಮಕ್ಕಳೊಂದಿಗೆ ತಾಯಿಯ ಗಂಟಲು ಕತ್ತರಿಸಿ ಕೊಲೆ!