ETV Bharat / state

ಒಟಿಪಿ ಪಡೆದು ಗ್ರಾಹಕನಿಗೆ ಪಂಗನಾಮ ; ಲಕ್ಷಾಂತರ ರೂಪಾಯಿ ದೋಚಿದ ಸೈಬರ್​ ಖದೀಮರು.. - money stolen by accused at raichur

ನಿಮ್ಮ ಡೆಬಿಟ್ ಕಾರ್ಡ್‌ಗೆ ಯೋನೊ ಬ್ಯಾಂಕಿಂಗ್ ಸೇವೆಯನ್ನ ಸೇರಿಸುವುದಾಗಿ ಹೇಳಿ, ಗ್ರಾಹಕನನ್ನ ನಂಬಿಸಿದ ಅಪರಿಚಿತರು, ಮೊಬೈಲ್​ಗೆ ಬರುವ ಒ.ಟಿ.ಪಿ. ತಿಳಿಸುವಂತೆ ಹೇಳಿದ್ದಾರೆ. ಇದಾದ ಬಳಿಕ ರಮೇಶ್ ಅಕೌಂಟ್​ನಿಂದ 2.56.400 ರೂಪಾಯಿ ಡ್ರಾ ಮಾಡಿರುವ ಎಸ್‌ಎಂಎಸ್ ಬಂದಿದೆ.

money stolen by accused at raichur
ಸೈಬರ್ ಕ್ರೈಂ
author img

By

Published : Jun 12, 2020, 3:57 PM IST

ರಾಯಚೂರು : ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಾಗರಾಳ ಗ್ರಾಮದ ರಮೇಶ ಕೇಶಪ್ಪ ಎಂಬಾತನ ಎಸ್‌ಬಿಐ ಖಾತೆಯಲ್ಲಿದ್ದ 2,56,400 ರೂಪಾಯಿಗಳಿಗೆ ಅಪರಿಚಿತರು ಖನ್ನ ಹಾಕಿದ್ದಾರೆ.

ಘಟನೆ ಹಿನ್ನೆಲೆ : ರಮೇಶ ಲಿಂಗಸೂಗೂರು ಎಸ್‌ಬಿಐ ಉಳಿತಾಯ ಖಾತೆ ಹೊಂದಿದ್ದರು. ಎಟಿಎಂ, ಡೆಬಿಟ್ ಕಾರ್ಡ್ ಪಡೆದುಕೊಂಡಿದ್ದಾರೆ. ನಾಗರಾಳ ಗ್ರಾಮದಲ್ಲಿ ಜೂನ್‌ 9ರಂದು ಮಧ್ಯಾಹ್ನ 1;25 ಗಂಟೆಯ ಸುಮಾರಿಗೆ, ಜ್ಯುವೆಲ್ಲರಿ ಶಾಪ್‌ನಲ್ಲಿರುವ ವೇಳೆ‌ ಯೋನೊ ಎಸ್‌ಬಿಐ ಬ್ಯಾಂಕಿಂಗ್​ಗೆ ಸಂಬಂಧಿಸಿದಂತೆ ಅಂತರ್ಜಾಲದಲ್ಲಿ ಮಾಹಿತಿಗಾಗಿ ಶೋಧಿಸಿ, ಗ್ರಾಹಕ ಸೇವೆ 18002083702 ಕರೆ ವಿಚಾರಿಸಿಕೊಂಡಿದ್ದಾರೆ.

ಮೋಸಗೊಳಿಸಿದ್ದು ಹೇಗೆ?: ಇವರು ಮಾಹಿತಿಯನ್ನು ಹುಡುಕಿರುವ ವಿಷಯ ತಿಳಿದಿರುವ ಅಪರಿಚಿತರು ಮೊಬೈಲ್‌ ಸಂಖ್ಯೆ-917044513700ನಿಂದ ಕರೆ ಮಾಡಿ ಎಸ್‌ಬಿಐ ಬ್ಯಾಂಕಿನ ಸಿಬ್ಬಂದಿಯೆಂದು ನಂಬಿಸಿ, ಡೆಬಿಟ್ ಕಾರ್ಡ್‌ನ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ನಿಮ್ಮ ಡೆಬಿಟ್ ಕಾರ್ಡ್‌ಗೆ ಯೋನೊ ಬ್ಯಾಂಕಿಂಗ್ ಸೇವೆ ಸೇರಿಸುವುದಾಗಿ ಹೇಳಿ, ಗ್ರಾಹಕನನ್ನ ನಂಬಿಸಿ ಮೊಬೈಲ್​ಗೆ ಬರುವ ಒಟಿಪಿ ತಿಳಿಸುವಂತೆ ಹೇಳಿದ್ದಾರೆ. ಇದಾದ ಬಳಿಕ ರಮೇಶ್ ಅಕೌಂಟ್​ನಿಂದ 2,56,400 ರೂ. ಡ್ರಾ ಮಾಡಿರುವ ಎಸ್‌ಎಂಎಸ್ ಬಂದಿದೆ.

ಇದಾದ ಬಳಿಕ ತಕ್ಷಣ ಅನುಮಾನಗೊಂಡ ರಮೇಶ್ ಈ ಕುರಿತಂತೆ ಬ್ಯಾಂಕ್ ಮ್ಯಾನೇಜರ್‌ನ ವಿಚಾರಿಸಿದಾಗ ಅಪರಿಚಿತರು ನಂಬಿಸಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಹಣ ಕಳೆದುಕೊಂಡ ರಮೇಶ್ ಇದೀಗ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.