ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಬಾಗೂರು, ಹೇರುಂಡಿ ಗ್ರಾಮದ ಹತ್ತಿರುವ ಬರುವ ಕೃಷ್ಣಾ ನದಿಯ ತೀರದಲ್ಲಿ ಎಗ್ಗಿಲ್ಲದೇ ಹಗಲು ರಾತ್ರಿ ಎನ್ನದೇ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಈ ಅಕ್ರಮ ತಡೆಯುವಂತೆ ಹಲವು ಬಾರಿ ಶಾಸಕಿ ಕರೆಮ್ಮ ತಾಲೂಕು ಆಡಳಿತಕ್ಕೆ, ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದರು.
ಅಲ್ಲದೇ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಮಂತ್ರಿ ಡಾ. ಶರಣಪ್ರಕಾಶ್ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಧ್ವನಿ ಎತ್ತುವ ಮೂಲಕ ಮರಳು ಮಾಫಿಯಾಯನ್ನು ಮಟ್ಟ ಹಾಕಬೇಕೆಂದು ಒತ್ತಾಯಿಸಿದ್ದರು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದರು.
ಆದರೂ ರಾಜಾರೋಷವಾಗಿ ಪರವಾನಗಿ ಇಲ್ಲದೇ ಮರಳುಗಾರಿಕೆ ನಡೆಯುತ್ತಿತ್ತು. ಇದನ್ನು ಮಟ್ಟ ಹಾಕಬೇಕು ಎಂದು ತಡರಾತ್ರಿ ಶಾಸಕಿ ಕರೆಮ್ಮ ನಾಯಕ್ ಹಾಗೂ ತಮ್ಮ ಬೆಂಬಲಿಗರೊಂದಿಗೆ ಅಕ್ರಮವಾಗಿ ನಡೆಯುತ್ತಿರುವ ಮರಳು ಸ್ಟಾಕ್ ಯಾರ್ಡ್ ಮೇಲೆ ದಾಳಿ ನಡೆಸಿದಾಗ, ಅಕ್ರಮ ಮರಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಇನ್ನು ಈ ವೇಳೆ, ಸಂಬಂಧಿಸಿದ ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆದರೂ ಸೂಕ್ತವಾದ ಉತ್ತರ ದೊರೆಯದೇ ಇರುವುದಕ್ಕೆ ಶಾಸಕಿ ಅಧಿಕಾರಿಗಳ ವಿರುದ್ಧ ಗರಂ ಆದರು. ’’ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಇಷ್ಟೆಲ್ಲ ನಡೆಯುತ್ತಿದ್ದರು, ಸಂಬಂಧಿಸಿದ ಪೊಲೀಸರು ಸುಮ್ಮನ್ನಿದ್ದಾರೆ. ಪೊಲೀಸ್ ಠಾಣೆ ಪಿಎಸ್‌ಐಗಳು, ಸಿಬ್ಬಂದಿಗಳೇ ಈ ಅಕ್ರಮದಲ್ಲಿ ಶಾಮೀಲು ಆಗಿದ್ದಾರೆ. ನ್ಯಾಯ ಸಮತವಾಗಿ ಕೆಲಸ ಮಾಡಬೇಕಾದ ಪೊಲೀಸ್ ಸಿಬ್ಬಂದಿಗಳು ಅಕ್ರಮ ಸಂಪಾದನೆ ತೊಡಗಿಕೊಂಡು, ಹೊಲ, ದೊಡ್ಡ ಮನೆ ಕಟ್ಟಿಸುವುದು ಎನ್ನುವುದ ಕುರಿತಾಗಿ ಕೆಲಸ ಮಾಡುತ್ತಾರೆ ಹೊರತು ಯಾರು ಪೊಲೀಸ್ ಕೆಲಸ ಸಂಪರ್ಕವಾಗಿ ನಿಭಾಹಿಸುತ್ತಿಲ್ಲ‘‘ ಎಂದು ಪೊಲೀಸ್ ಇಲಾಖೆಯ ವಿರುದ್ಧ ಹರಿಹಾಯ್ದರು.
ಈ ವೇಳೆ ಮಾತನಾಡಿದ ಕರೆಮ್ಮ ನಾಯಕ್, ’’ಕಾನೂನು ವಿರುದ್ಧವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವವರೆಗೂ ನನ್ನ ಹೋರಾಟ ನಿರಂತರವಾಗಿ ಇರುತ್ತದೆ. ಅಮಾಯಕ ಸಣ್ಣ-ಪುಟ್ಟ ಟ್ರ್ಯಾಕ್ಟರ್ ತೆಗೆದುಕೊಂಡವರ ಮೇಲೆ ಕೇಸ್ ದಾಖಲಿಸುವ ಅಧಿಕಾರಿಗಳು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಂಧೆ ನಡೆಯುತ್ತಿದ್ದರೂ ಯಾವುದೇ ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ. ಇದರ ಬಗ್ಗೆ ಧ್ವನಿ ಎತ್ತಿದವರಿಗೆ ವಾರ್ನಿಂಗ್ ಮಾಡುವುದು, ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಈ ಅಕ್ರಮ ಚಟುವಟಿಕೆಗಳು ನಿಲ್ಲಬೇಕು. ಅಲ್ಲಿಯವರೆಗೆ ನಾನು ಹೋರಾಟ ನಿಲ್ಲಿಸುವುದಿಲ್ಲ‘‘ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರು ನಗರದಲ್ಲಿ ರಾಜಕಾಲುವೆ ಒತ್ತುವರಿ: ವಸ್ತುಸ್ಥಿತಿ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ