ರಾಯಚೂರು : ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ.ಎಸ್.ಹೂಲಗೇರಿ ಚಲಿಸುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಹತ್ತಿರದ ಕನಾಸವಿ ಕ್ರಾಸ್ ಬಳಿ ಈ ಘಟನೆ ಸಂಭವಿಸಿದೆ. ಇಳಕಲ್ ನಿಂದ ಲಿಂಗಸೂಗೂರು ಕಡೆ ಬರುವಾಗ ಕನಾಸವಿ ಕ್ರಾಸ್ನ ತಿರುವಿನಲ್ಲಿ ಲಾರಿ ಕಾರ್ಗೆ ಡಿಕ್ಕಿ ಹೊಡೆದಿದೆ.
ಶಾಸಕರು ಕುಳಿತುಕೊಂಡಿದ್ದ ಡೋರ್ಗೆ ಲಾರಿ ಡಿಕ್ಕಿ ಹೊಡೆದಿದ್ದು, ಶಾಸಕ ಹೂಲಗೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುದಗಲ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.