ಲಿಂಗಸುಗೂರು (ರಾಯಚೂರು) : ಶಾಸಕ ಡಿ ಎಸ್ ಹೂಲಗೇರಿಗೆ ಕೊರೊನಾ ದೃಢವಾಗಿದೆ. ಕೆಲ ದಿನಗಳಿಂದ ಕೆಲಸ ಕಾರ್ಯಗಳಿಗೆ ಬಂದ ಕಾರ್ಯಕರ್ತರು ಆರೋಗ್ಯ ತಪಾಸಣೆ ಮಾಡಿಕೊಳ್ಳುವಂತೆ ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.
ಕೋವಿಡ್ ದೃಢಪಟ್ಟಿದ್ದರಿಂದ ಎರಡು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಶಾಸಕರು ಗುಣಮುಖರಾಗುತ್ತಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಅವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.
ಈ ಕುರಿತು ಈಟಿವಿ ಭಾರತ ಸಂಪರ್ಕಿಸಿದಾಗ, ಕೋವಿಡ್ ದೃಢಪಟ್ಟಿದ್ದು ನಿಜ. ಚೇತರಿಸಿಕೊಳ್ಳುತ್ತಿದ್ದು, ಕಾರ್ಯಕರ್ತರು ಭಯಪಡುವ ಅಗತ್ಯವಿಲ್ಲ. ಆದಷ್ಟು ಕ್ಷೇತ್ರದ ಜನತೆ ಕೊರೊನಾ ವೈರಸ್ ಹರಡದಂತೆ ಎಚ್ಚರಿಕೆವಹಿಸಲು ಮನವಿ ಮಾಡಿದರು.