ETV Bharat / state

ಮಸ್ಕಿ ಉಪಚುನಾವಣೆ.. ಕಣದಲ್ಲಿರುವ ಕೈ-ಕಮಲ ಅಭ್ಯರ್ಥಿಗಳಿಬ್ಬರೂ ಕೋಟ್ಯಾಧೀಶರು

author img

By

Published : Mar 26, 2021, 7:22 PM IST

11.55 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನ ಹೊಂದಿದ್ದು, ಒಟ್ಟು 3.10 ಕೋಟಿ ರೂ. ಮೌಲ್ಯದ ಕೃಷಿ ಜಮೀನು, ನಿವೇಶನ ಮತ್ತು ಮನೆಗಳಿವೆ. ಪತ್ನಿ ಪದ್ಮಾವತಿ ಹೆಸರಿನಲ್ಲಿ 85.16 ಲಕ್ಷ ರೂ.ಮೌಲ್ಯದ ಜಮೀನು, ಕಾರು ಖರೀದಿಸಲು 33,58 ಲಕ್ಷ ರೂ. ಸಾಲ ಪಡೆದಿರುವುದಾಗಿ ನಾಮಪತ್ರ ಸಲ್ಲಿಕೆ ವೇಳೆ ಘೋಷಿಸಿದ್ದಾರೆ..

Maski By poll Candidates Declared Property Details
ಮಸ್ಕಿ ಕಾಂಗ್ರೆಸ್​ ಬಿಜೆಪಿ ಅಭ್ಯರ್ಥಿಗಳಿಂದ ಆಸ್ತಿ ವಿವರ ಘೋಷಣೆ

ರಾಯಚೂರು : ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರ ಜೋರಾಗಿ ನಡೆಯುತ್ತಿದೆ. ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರ ಘೋಷಣೆ ಮಾಡಿಕೊಂಡಿದ್ದಾರೆ. ಇಬ್ಬರು ಅಭ್ಯರ್ಥಿಗಳು ಕೂಡ ಕೋಟ್ಯಾಧಿಪತಿಗಳಾಗಿದ್ದಾರೆ.

ಕಾಂಗ್ರೆಸ್​ ಅಭ್ಯರ್ಥಿ ಆಸ್ತಿ ವಿವರ : ಕಾಂಗ್ರೆಸ್​ನಿಂದ ಚುನಾವಣೆಗೆ ಸ್ಪರ್ಧಿಸಿರುವ ಆರ್ ಬಸವನಗೌಡ ತುರುವಿಹಾಳ 47.57 ಲಕ್ಷ ರೂ. ಮೌಲ್ಯದ ಚರಾಸ್ತಿ ಮತ್ತು 1 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಬ್ಯಾಂಕ್​ಗಳಲ್ಲಿ 13.39 ಲಕ್ಷ ರೂ. ಸಾಲವಿದೆ. ಅವಲಂಬಿತರ ಹೆಸರಿನಲ್ಲಿ ಯಾವುದೇ ಆಸ್ತಿ ಹೊಂದಿಲ್ಲ.

ಎರಡು ಲಕ್ಷ ರೂ. ನಗದು, ಬ್ಯಾಂಕ್ ಖಾತೆಯಲ್ಲಿ 7 ಸಾವಿರ ರೂ. ಹಣ, 11.70 ಲಕ್ಷ ರೂ. ಮೌಲ್ಯದ ಎಲ್ಐಸಿ ಪಾಲಿಸಿ, 26 ಲಕ್ಷ ರೂ. ಮೌಲ್ಯದ ಇನ್ನೋವಾ ಕಾರು, 8.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಜೊತೆಗೆ ತುರವಿಹಾಳ ಮತ್ತು ಸಿಂಧನೂರಿನಲ್ಲಿ ಕೃಷಿ ಜಮೀನು, ಮನೆ ಸೇರಿ ಒಟ್ಟು ಒಂದು ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಆಸ್ತಿ ವಿವರ : ಮಾಜಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್, 1.74 ಕೋಟಿ ರೂ. ಮೌಲ್ಯದ ಚರಾಸ್ತಿ, 4.10 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, ಬ್ಯಾಂಕ್​ಗಳಿಂದ 33.58 ಲಕ್ಷ ರೂ. ಸಾಲ ಪಡೆದಿದ್ದಾರೆ. ಪತ್ನಿ ಪದ್ಮಾವತಿ ಕೂಡ ಕೋಟ್ಯಾಧೀಶೆಯಾಗಿದ್ದು, 21.97 ಲಕ್ಷ ರೂ. ಮೌಲ್ಯದ ಚರಾಸ್ತಿ ಮತ್ತು 85.16 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

8.20 ಲಕ್ಷ ರೂ. ನಗದು, ವಿವಿಧ ಬ್ಯಾಂಕ್​ ಖಾತೆಗಳಲ್ಲಿ 4.47 ಲಕ್ಷ ರೂ. ಹಣ, 14.15 ಲಕ್ಷ ರೂ. ಮೌಲ್ಯದ ಬಾಂಡ್​ ಹೊಂದಿದ್ದಾರೆ. 24.50 ಲಕ್ಷ ರೂ. ಮೌಲ್ಯದ ಇನ್ನೋವಾ ಕಾರು, 24 ಲಕ್ಷ ರೂ. ಮೌಲ್ಯದ ಎಂಡೋವರ್ ಕಾರು ಹಾಗೂ 14.21 ಲಕ್ಷ ರೂ. ಮೌಲ್ಯದ ಎಸ್​ ಕ್ರಾಸ್ ಕಾರಿನ ಒಡೆಯರಾಗಿದ್ದಾರೆ.

ಓದಿ : ಓದಿ : ಬಿ ಫಾರಂ ಪಡೆದ ಬಸವಕಲ್ಯಾಣದ ಬಿಜೆಪಿ ಅಭ್ಯರ್ಥಿ ಶರಣು ಕುಲಗಾರ್‌

11.55 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನ ಹೊಂದಿದ್ದು, ಒಟ್ಟು 3.10 ಕೋಟಿ ರೂ. ಮೌಲ್ಯದ ಕೃಷಿ ಜಮೀನು, ನಿವೇಶನ ಮತ್ತು ಮನೆಗಳಿವೆ. ಪತ್ನಿ ಪದ್ಮಾವತಿ ಹೆಸರಿನಲ್ಲಿ 85.16 ಲಕ್ಷ ರೂ.ಮೌಲ್ಯದ ಜಮೀನು, ಕಾರು ಖರೀದಿಸಲು 33,58 ಲಕ್ಷ ರೂ. ಸಾಲ ಪಡೆದಿರುವುದಾಗಿ ನಾಮಪತ್ರ ಸಲ್ಲಿಕೆ ವೇಳೆ ಘೋಷಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.