ETV Bharat / state

ರಾಜ್ಯದಾದ್ಯಂತ ಸೂರ್ಯಗ್ರಹಣ ವೀಕ್ಷಣೆ: ವಿವಿಧ ಸಂಘಟನೆಗಳಿಂದ ಜಾಗೃತಿ - ರಾಜ್ಯದಾದ್ಯಂತ ಸೂರ್ಯ ಗ್ರಹಣ ವೀಕ್ಷಣೆ

ರಾಜ್ಯದ ವಿವಿಧೆಡೆ ಕಂಕಣ ಸೂರ್ಯಗ್ರಹಣ ವೀಕ್ಷಣೆ. ಬ್ರೇಕ್​ ಥ್ರೋ ಸೈನ್ಸ್​ ಸೊಸೈಟಿ ಹಾಗೂ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್​ ಆರ್ಗನೈಸೇಶನ್​ನಿಂದ ವೈಜ್ಞಾನಿಕ ಅರಿವು ಹಾಗೂ ಮೂಢನಂಬಿಕೆ ಹೋಗಲಾಡಿಸುವ ಪ್ರಯತ್ನ ನಡೆಸಲಾಯಿತು.

many organization held solar eclipse show throughout state
ಸೂರ್ಯ ಗ್ರಹಣ ವೀಕ್ಷಣೆ
author img

By

Published : Dec 26, 2019, 8:18 PM IST

ರಾಜ್ಯದ ವಿವಿಧೆಡೆ ಇಂದು ವಿದ್ಯಾರ್ಥಿಗಳು, ಸಾರ್ವಜನಿರು ಸೇರಿದಂತೆ ಅನೇಕರು ಸೂರ್ಯಗ್ರಹಣ ವೀಕ್ಷಿಸಿದರು. ಎಐಡಿಎಸ್​ಒ, ಬ್ರೇಕ್​ ಥ್ರೋ ಸೈನ್ಸ್​ ಸೊಸೈಟಿ ಸೇರಿದಂತೆ ವಿವಿಧ ಸಂಘಟನೆಗಳು ಸೂರ್ಯಗ್ರಹಣದ ಬಗೆಗಿನ ಮೂಢನಂಬಿಕೆಗಳನ್ನು ಸಾರ್ವಜನಿಕರಿಗೆ ತಿಳಿಸಿದರು.

ಸೂರ್ಯ ಗ್ರಹಣ ವೀಕ್ಷಣೆ

ರಾಯಚೂರಿನಲ್ಲಿ ಬ್ರೇಕ್ ಥ್ರೋ ಸೈನ್ಸ್​ ಸೊಸೈಟಿ ಸಂಘಟಕರು ಸಾರ್ವಜನಿಕರಿಗೆ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸುವುದರ ಜೊತೆಗೆ ಗ್ರಹಣದ ವೇಳೆಯಲ್ಲಿ ಆಹಾರ ಸೇವಿಸಬಹುದು. ಗ್ರಹಣದ ಬಗ್ಗೆ ವೈಜ್ಞಾನಿಕ ಅರಿವು ಮುಖ್ಯ ಎಂದು ಹೇಳಿದರು. ಗ್ರಹಣದ ವೇಳೆ ಚುರುಮುರಿ, ಶೇವ್​ ಇತರೆ ತಿಂಡಿಗಳನ್ನು ಸೇವಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ವಿಜಯಪುರದ ಪ್ರಮುಖ ಸ್ಥಳಗಳಲ್ಲಿ ಶಿಕ್ಷಣ, ವಿಜ್ಞಾನ ಸಂಸ್ಥೆಗಳು ಸಾರ್ವಜನಿಕರಿಗೆ ಹಲವು ಸಾಧನಗಳ ಮೂಲಕ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದವು.‌ ಕೇಂದ್ರ ಬಸ್ ನಿಲ್ದಾಣದಲ್ಲಿ ಬ್ರೇಕ್ ಥ್ರೋ ಸೈನ್ಸ್​ ಸೊಸೈಟಿ, ಗ್ರಹಣ ಕುರಿತು ವೈಜ್ಞಾನಿಕ ತಿಳಿವಳಿಕೆ ನೀಡಿತು.

ಶಿರಸಿಯ ಮಾರಿಕಾಂಬಾ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸೂರ್ಯಗ್ರಹಣ ವೀಕ್ಷಿಸಿದರು. ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಗ್ರಹಣ ವೀಕ್ಷಿಸಲು ವಿಶೇಷವಾದ ಕನ್ನಡಕ ವ್ಯವಸ್ಥೆ ಮಾಡಲಾಗಿತ್ತು.

ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರ ಮತ್ತು ಯಾದಗಿರಿ ಜಿಲ್ಲಾಡಳಿತ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಸೂರ್ಯಗ್ರಹಣ ವೀಕ್ಷಣೆ ಹಮ್ಮಿಕೊಳ್ಳಲಾಗಿತ್ತು. ಯಾದಗಿರಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ನಗರದ ನೂರಾರು ಸಾರ್ವಜನಿಕರು ಸೂರ್ಯಗ್ರಹಣ ವೀಕ್ಷಣೆ ಮಾಡಿ ಖುಷಿ ಪಟ್ಟರು.

ಗಂಗಾವತಿಯ ಹಮಾಲರ ಕಾಲೋನಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗ್ರಹಣ ವೀಕ್ಷಣೆಯಲ್ಲಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಪಾಲ್ಗೊಂಡು ಸೌರಫಲಕದಿಂದ ಗ್ರಹಣ ವೀಕ್ಷಿಸಿದರು. ಸೌರಫಲಕ, ಕಪ್ಪು ಕನ್ನಡಕಗಳಿಂದ ಗ್ರಹಣ ವೀಕ್ಷಣೆ ಮಾಡಲಾಯಿತು. ಶಾಸಕ ಮುನವಳ್ಳಿ ಸೌರ ಗ್ರಹಣದ ದೃಶ್ಯಗಳನ್ನು ಕಣ್ತುಂಬಿಕೊಂಡರು.

ಶಿವಮೊಗ್ಗದಲ್ಲಿ ಗ್ರಹಣ ವೀಕ್ಷಿಸಲು ಬೆಳಗ್ಗೆ 8 ಗಂಟೆಗೆ ಜನರು, ವಿದ್ಯಾರ್ಥಿಗಳು ಆಗಮಿಸಿದ್ದು, ರಾಜ್ಯ ವಿಜ್ಞಾನ ಪರಿಷತ್ ಕಂಕಣ ಸೂರ್ಯಗ್ರಹಣವನ್ನು ವೀಕ್ಷಿಸಲು ವ್ಯವಸ್ಥೆ ಮಾಡಿತ್ತು. ರಾಷ್ಟ್ರೀಯ ಶಿಕ್ಷಣ ಸಮಿತಿಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೂರ್ಯಗ್ರಹಣ ವೀಕ್ಷಣೆ ಮಾಡಲಾಯಿತು.

ಚಾಮರಾಜನಗರದಲ್ಲಿ ಗ್ರ್ಯಾವಿಟಿ ಸೈನ್ಸ್ ಫೌಂಡೇಷನ್ ಹಾಗೂ ಶಿಕ್ಷಣ ಇಲಾಖೆ ಜಂಟಿಯಾಗಿ ನಗರದ ಜೆಎಸ್ಎಸ್ ಪ್ರೌಢ ಶಾಲೆಯಲ್ಲಿ ಸೂರ್ಯಗ್ರಹಣ ವೀಕ್ಷಣೆ ಕಾರ್ಯಕ್ರಮ ಏರ್ಪಡಿಸಿ, ಸೋಲಾರ್ ಫಿಲ್ಟರ್, ಮಿರರ್ ಬಾಲ್ ಪ್ರೊಜೆಕ್ಟರ್​​​​, ಮಿರರ್ ರಿಫ್ಲೆಕ್ಷನ್ ಹಾಗೂ ಪಿನ್ ಹೋಲ್ ಕ್ಯಾಮರಾ ಮೂಲಕ ವಿದ್ಯಾರ್ಥಿಗಳಿಗೆ ಗ್ರಹಣದ ದೃಶ್ಯಗಳನ್ನು ತೋರಿಸಲಾಯಿತು.

ಚಿತ್ರದುರ್ಗದ ಮುರುಘಾ ಮಠದ ಆವರಣದಲ್ಲಿ ಗ್ರಹಣ ವೀಕ್ಷಣೆಗೆ ಡಾ. ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 200ಕ್ಕೂ ಹೆಚ್ಚು ಸಾರ್ವಜನಿಕರು, ವಿದ್ಯಾರ್ಥಿಗಳು ವೀಕ್ಷಿಸಬಹುದಾದ ಉಪಕರಣಗಳನ್ನು ಮಠದ ಆವರಣದಲ್ಲಿ ಸಜ್ಜುಗೊಳಿಸಲಾಗಿತ್ತು.

Intro:ದೇಶಾದ್ಯಂತ ಇಂದು ಘಟಿಸಿದ ಅಪರೂಪದ ಕಂಕಣ ಗ್ರಹಣವನ್ನು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯಿಂದ ನಗರದ ಮಾವಿನಕೆರೆಯ ಬಳಿ ಮಂಡೊಳ,ಖಾರ ತಿಂದು ವಿಭಿನ್ನವಾಗಿ ನೋಡಿದರು.

Body:ಸಂಘಟನೆಯ ಪದಾಧಿಕಾರಿಗಳು ಜಾಗೂ ವಿದ್ಯಾರ್ಥಿಗಳು ಬ್ರೇಕ್ ಥ್ರೋ ಸಂಸ್ಥೆ ನೀಡಿದ ಎಕ್ಸರೆ ಶೀಟ್ ನ ಶಷ್ಮಾ ( ಗ್ಲಾಸ್) ನಿಂದ ಕುತುಹಲದಿಂದ ವೀಕ್ಷಣೆ ಮಾಡಿದರು.
ಅಲ್ಲದೇ ಗ್ರಹಣಗಳ ಸಂದರ್ಭದಲ್ಲಿ ಊಟ ಮಾಡಬಾರದು,ಗ್ರಹಣ ವೀಕ್ಷಿಸಬಾರದು,ಮನೆಯ ಹೊರಗೆ ಬಾರದು ಎಂಬೆಲ್ಲ ಮೂಢನಂಬಿಕೆ ಚಾಲ್ತಿಯಲ್ಲಿದ್ದು ಇದನ್ನು ಮೂಡನಂಬಿಕೆ ,ಸುಳ್ಳು ಎಂದು ಮಾಡಲು ಮಂಡೋಳ,ಖಾರ ತಿಂದು ವೀಕ್ಷಣೆ ಮಾಡಿದರು.

ಬೈಟ್: ಅನುಕ್ರಮವಾಗಿ 1) ಹೇಮಂತ್ ,ಎಐಡಿಎಸ್ಓ ಪದಾಧಿಕಾರಿ,

2) ಪೀರ್ ಸಾಬ್ ಕಾರ್ಯದರ್ಶಿ ವಿದ್ಯಾರ್ಥಿ ಸಂಘಟನೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.