ರಾಯಚೂರು: ಕೃಷ್ಣಾ ನದಿಯಲ್ಲಿ ಕೆಪಿಸಿಎಲ್‌ನಿಂದ ನಿರ್ಮಿಸಿರುವ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ವ್ಯಕ್ತಿಯೋರ್ವ ಕ್ರೇನ್‌ನ ಸಹಾಯದಿಂದ ಬ್ರಿಡ್ಜ್ ಗೇಟ್ ತೆರೆಯುವ ಯತ್ನ ನಡೆಸಿರುವ ದೃಶ್ಯ ಸೆರೆಯಾಗಿದೆ.
ತಾಲೂಕಿನ ಗುರ್ಜಾಪುರ ಗ್ರಾಮದ ಹತ್ತಿರ ಕೆಪಿಸಿಎಲ್‌ನಿಂದ ನಿರ್ಮಿಸಲಾಗಿರುವ ಗೇಟ್‌ಗಳನ್ನು ಮುಂಜಾಗ್ರತಾ ಕ್ರಮವಾಗಿ ತೆಗೆಯಬೇಕಾಗಿತ್ತು. ಸುಮಾರು 100 ಕ್ಕೂ ಹೆಚ್ಚಿರುವ ಗೇಟ್‌ಗಳ ಪೈಕಿ ಕೆಲವೇ ಗೇಟ್‌ಗಳನ್ನು ತೆಗೆಯಲಾಗಿತ್ತು. ಇನ್ನುಳಿದ ಗೇಟ್‌ಗಳನ್ನು ಹಾಗೆಯೇ ಬಿಡಲಾಗಿತ್ತು. ಹೀಗಾಗಿ, ಕೆಪಿಸಿಎಲ್ ಅಧಿಕಾರಿಯೊಬ್ಬರು ಕ್ರೇನ್ ತರಿಸಿ, ಅದರಲ್ಲಿ ಯುವಕನನ್ನು ಕಳುಹಿಸಿ ಗೇಟ್ ತೆಗೆಯಲು ಮುಂದಾಗಿದ್ದಾರೆ. ಆದರೆ ನೀರಿನ ರಭಸಕ್ಕೆ ಹೆದರಿದ ಯುವಕ ಗೇಟ್ ತೆರೆಯಲು ಹಿಂದೇಟು ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ.
ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಲಕ್ಷಾಂತರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಗೇಟ್‌ಗಳನ್ನು ತೆರೆಯುವ ಕೆಲಸವನ್ನು ಮಾಡಬೇಕಿತ್ತು. ಆದರೆ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಇನ್ನು ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ನೀರು ಅಪಾರ ಪ್ರಮಾಣದಲ್ಲಿ ಸಂಗ್ರಹವಾಗಿರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದಾರೆ.
ಓದಿ: ಹುಬ್ಬಳ್ಳಿ: ರಸ್ತೆಯೆಲ್ಲ ಗುಂಡಿಮಯ.. ಪಾಲಿಕೆ - ಜನಪ್ರತಿನಿಧಿಗಳ ವಿರುದ್ದ ಜನರಿಂದ ಹಿಡಿಶಾಪ