ರಾಯಚೂರು: ವ್ಯಕ್ತಿವೋರ್ವನನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಡದರಾಳ ಗ್ರಾಮದ ಶರಣಪ್ಪ ಯಾದವ್ ಬಂಧಿತ ಆರೋಪಿ. ಈತನ ಜ.27 ರಂದು ಗದ್ದಪ್ಪ ಎಂಬ ವ್ಯಕ್ತಿಯನ್ನು ಈತ ಕೊಲೆ ಮಾಡಿ ಪರಾರಿಯಾಗಿದ್ದ. ಕೊಲೆಯಾದ ವ್ಯಕ್ತಿಯ ಪತ್ನಿ ಮುದಗಲ್ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ನೀಡಿದ್ದರು. ಪ್ರಕರಣವನ್ನ ಭೇದಿಸಿಲು ಮಸ್ಕಿ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಿ, ಆರೋಪಿಗಾಗಿ ಬಲೆ ಬೀಸಲಾಗಿತ್ತು.
ಪ್ರಕರಣವನ್ನ ಬೆನ್ನತ್ತಿದ ಪೊಲೀಸ್ ತಂಡ ಆರೋಪಿಯನ್ನ ಸೆರೆ ಹಿಡಿದಿದ್ದು, ಸದ್ಯ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಂಡದ ಈ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.