ರಾಯಚೂರು: ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮದ್ಯವರ್ಜನ ಶಿಬಿರದ ಮೂಲಕ ಹಲವಾರು ಮದ್ಯ ವ್ಯಸನಿಗಳನ್ನು ಕುಡಿತದಿಂದ ವಿಮುಖರಾಗುವಂತೆ ಮಾಡಿದೆ.
ಮಹಾತ್ಮ ಗಾಂಧಿಯವರ 150ನೇ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಇಂದು ವ್ಯಸನಮುಕ್ತ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಶಾಸಕ ರಾಜಾ ವೆಂಕಟಪ್ಪನಾಯಕ ಉದ್ಘಾಟಿಸಿದ್ರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ ಜನಜಾಗೃತಿ ಜಾಥಾ ಮತ್ತು ವ್ಯಸನಮುಕ್ತ ಸಮಾವೇಶ ನಡೆಯಿತು. ಅಲ್ಲದೆ ಒಂದು ವಾರಗಳ ಕಾಲ ಮದ್ಯವ್ಯಸನಿಗಾಗಿ ಶಿಬಿರ ಹಮ್ಮಿಕೊಂಡಿದ್ದು, ಕುಡಿತಕ್ಕೆ ದಾಸರಾದರಾದವರಿಗೆ ಈ ಶಿಬಿರದಲ್ಲಿ ತರಬೇತಿ ನೀಡಿ ವ್ಯಸನಮುಕ್ತರಾಗಿ ಮಾಡಲಾಗುತ್ತೆ.
ಜೊತೆಗೆ ಯೋಗ, ಧ್ಯಾನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತಜ್ಞರ ಸಮಾಲೋಚನೆ ಮೂಲಕ ಕುಡಿತದಿಂದ ಆಗುವ ನಷ್ಟ ಹಾಗೂ ದುಷ್ಪರಿಣಾಮದ ಬಗ್ಗೆ ತಿಳಿ ಹೇಳಲಾಗುತ್ತೆ. ಪ್ರತಿ ವರ್ಷ ನಡೆಯುವ ಈ ಮದ್ಯವರ್ಜನ ಶಿಬಿರದಲ್ಲಿ ಕುಡಿತ ಚಟ ಉಳ್ಳವರು ಪಾಲ್ಗೊಂಡು ಕುಡಿತವನ್ನು ತ್ಯಜಿಸಿದ್ದಾರೆ.